ಆಕ್ಟಿನೋಡ್ಯಾಫ್ನೆ ಅಂಗುಸ್ಟಿಫೋಲಿಯ (Blume) Nees - ಲಾರೇಸಿ

Synonym : ಲಿಟ್ಸಿಯ ಅಂಗುಸ್ಟಿಫೋಲಿಯ Blume

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ತುಕ್ಕು ಬಣ್ಣದ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡಣಾ ಉಪತರಂಗಿತ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2.5 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ದುಂಡಾಕಾರದಲ್ಲಿದ್ದು ತುಕ್ಕು ವರ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 12-27 x 4-6.5 ಸೆಂ.ಮೀ ಗಾತ್ರ ಹೊಂದಿದ್ದು,ಸಂಕುಚಿತ- ಅಂಡವೃತ್ತದಿಂದ ಬುಗುರಿಯವರೆಗಿನ ಆಕಾರದಲ್ಲಿರುತ್ತವೆ. ಪತ್ರದ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ,ಬೆಣೆಯಾಕಾರದಿಂದ ಚೂಪದ ಮಾದರಿವರೆಗಿನ ಬುಡ ಹೊಂದಿರುತ್ತವೆ;ಪತ್ರಗಳ ಅಂಚು ತರಂಗಿತವಾಗಿರುತ್ತದೆ;ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿದ್ದು ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ;ಪತ್ರಗಳು ಎಳೆಯದಾಗಿದ್ದಾಗ ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣಹೊಂದಿದ್ದು ನಂತರ ಪತ್ರದ ತಳ ಭಾಗದ ಮಧ್ಯನಾಳ ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 -10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚೂ ಕಡಿಮೆ ತೀರಾ ಸನಿಹವಾಗಿದ್ದು ಲಂಬರೇಖೆಗೆ ಸಮಕೋನದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಿದ್ದು ಪ್ರಮುಖವಾಗಿರುವುದಿಲ್ಲ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾದ್ದು, ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಹೆಣ್ಣು ಹೂಗಳು ಕಿರಿದಾದ ವೃಂತವುಳ್ಳ ಪೀಠಛತ್ರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು 1 ಸೆಂ.ಮೀ.ವರೆಗಿನ ಅಡ್ಡಗಳತೆ ಹೊಂದಿರುತ್ತವೆ ಮತ್ತು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1400 ಮೀ. ಎತ್ತರದವರೆಗಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಪ್ರಭೇದ ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Wall., Pl. As. Rar.3:31.1832;Saldanha, Fl. Karnataka 1:56. 1996.

Top of the Page