ಅಗಸ್ತ್ಯಮಲೆಯ ಪಾಸಿಫ್ಲೋರ (Bedd.) S. Rajkumar & Janarth. - ಕ್ಲೂಸಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಬಳಿಗೆ, ಕಿರ್ಬಳ್ಳಿ, ಬಳಂಜಿ,ಬಲ್ಲಗಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡಗಳು ನಿರ್ದಿಷ್ಟವಾದ ಬುಡ ಹೊಂದಿದ್ದು ಬೂದು ಬಣ್ಣದ ತೊಗಟೆ ಸಮೇತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು 1.5 ಸೆಂ.ಮೀ, ಉದ್ದಹೊಂದಿದ್ದು ಕಾಲುವೆ ಗೆರೆ ಸಮೇತವಾಗಿರುತ್ತವೆ. ಎಲೆಪತ್ರಗಳು 12 X 4 ಸೆಂ ಮೀ ಗಾತ್ರವಿದ್ದು, ಚತುರಸ್ರದ ಆಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ, ದುಂಡಾದ ಅಥವಾ ಚೂಪಾದ ಬುಡವನ್ನು ಹೊಂದಿದ್ದು ನಯವಾದ ಅಂಚಿನ ಸಮೇತವಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಒಂಟಿಯಾಗಿ ಅಥವಾ ಜೋಡಿಯಾಗಿ ಉದುರಿದ ಎಲೆಗಳ ಅಕ್ಷಾಕಂಕುಳಿನಲ್ಲಿರುತ್ತವೆ; ಹೂತೊಟ್ಟುಗಳು 2.5 ಸೆಂ ಮೀ ಉದ್ದವಿದ್ದುರೋಮರಹಿತವಾಗಿರುತ್ತವೆ; ಪುಷ್ಪದಳಗಳು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಗೋಳಾಕಾರದಲ್ಲಿದ್ದು , 2 X 1.7 ಗಾತ್ರ ಹೊಮದಿದ್ದು ಎರಡು ಹಾಲೆಗಳನ್ನು ಹೊಂದಿರುತ್ತವೆ ಹಾಗೂ ಅಗ್ರದಲ್ಲಿ ಚೂಪಾಗಿದ್ದು ಒಂದು ಬೀಜವನ್ನೊಳ ಗೊಂಡಿರುತ್ತವೆ.

ಜೀವಪರಿಸ್ಥಿತಿ :

700 ರಿಂದ 900 ಮೀ ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳನಲ್ಲಿ ನದಿ ದಡಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಸಸ್ಯ ಅಗಸ್ತ್ಯಮಲೈನಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

J.J.Bot. res. Inst. Texas 1(1):129-133.2007; Bedd. Fl. Sylv. .93.1871;Gamble, Fl.Madras1:77.1997(re.ed.); Sasidharan, Biodiversity documentation for Kerala-Flowering Plants, part 6:43.2004;

Top of the Page