ಅಗ್ಲೇಯಿಯ ಸಿಂಪ್ಲಿಸಿಫೋಲಿಯ (Bedd.) Harms - ಮೀಲಿಯೇಸಿ

Synonym : ಬೆಡ್ಡೋಮಿಯ ಸಿಂಪ್ಲಿಸಿಫೋಲಿಯ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ನಕ್ಷತ್ರ-ರೋಮಗಳಿಂದ ಆವರಿಸಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಬಿಳಿ ಬಣ್ಣ ಹೊಂದಿದ್ದು ವಿಫುಲವಾಗಿರುವುದಿಲ್ಲ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ; ತೊಟ್ಟುಗಳು 1.3 ರಿಂದ 4 ಸೆಂ.ಮೀ. ಉದ್ದವಿದ್ದು ಎರಡೂ ತುದಿಯಲ್ಲಿ ಉಬ್ಬಿಕೊಂಡಿರುತ್ತವೆ ಮತ್ತು ನಕ್ಷತ್ರ-ರೋಮಗಳಿಂದ ಕೂಡಿರುತ್ತವೆ;ಪತ್ರಗಳು9.5-22.5 X 4.9-10.4 ಸೆಂ.ಮೀ. ಗಾತ್ರದಲ್ಲಿದ್ದುಅಂಡವೃತ್ತದಿಂದ ಬುಗುರಿಯ ಆಕಾರದಲ್ಲಿದ್ದು ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ತುದಿ ಹೊದಿರುತ್ತವೆ; ಪತ್ರಗಳ ಬುಡ ಚೂಪಲ್ಲದ ಅಥವಾ ಚೂಪಾದ ರೀತಿಯಲ್ಲಿರುತ್ತದೆ;ಅಂಚು ನಯವಾಗಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 12-14 ಜೋಡಿಗಳಿದ್ದು ಪತ್ರದ ತಳಭಾಗದಲ್ಲಿ ಪ್ರಮುಖವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಎಲೆಗಳಿಗಿಂತ ಚಿಕ್ಕದಾಗಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 2.5-4 ಸೆಂ.ಮೀ. ಉದ್ದ ಹೊಂದಿದ್ದು ಚತುರಸ್ರ ಅಥವಾ ಬುಗುರಿಯ ಆಕಾರದಲ್ಲಿದ್ದು ಅಗ್ರದಲ್ಲಿ ಕೊಕ್ಕಿನ ಸಮೇತವಿರುತ್ತವೆ ಮತ್ತು ದಟ್ಟವಾದ ತುಕ್ಕು ಬಣ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.

ಜೀವಪರಿಸ್ಥಿತಿ :

200 ಮತ್ತು 1400 ಮೀ. ನಡುವಿನ ಎತ್ತರದವರೆಗಿನ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಮೇಲ್ಛಾವಣಿ ಮರಗಳಾಗಿ ಕೆಳ ಮತ್ತು ಮಧ್ಯಮ ಎತ್ತರದ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಈ ಸಸ್ಯ ಪಶ್ಚಿಮ ಘಟ್ಟದ ದಕ್ಷಿಣ , ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ (ವಯನಾಡು ಮತ್ತುಕೊಡಗು ಪ್ರದೇಶಗಳು) ಬೆಳೆಯುತ್ತದೆ.

ಸ್ಥಿತಿ :

ನಶಿಸುವ ಭೀತಿಯಲ್ಲಿರುವ ಸ್ಥಿತಿ (IUCN 2000)

ಗ್ರಂಥ ಸೂಚಿ :

Engler and Prantl, Pflanzenf. ed. 2. 19b. 1: 146. 1940; Pannell, A taxonomic monograph of the Genus Aglaia Lour. (Meliaceae), 306. 1992; Gamble, Fl. Madras 1: 184.1997 (re. ed); Sasidharan, Biodiversity documentation for Kerala- Flowering Plants, part 6: 88. 2004; Saldanha, Fl. Karnataka 2: 230. 1996.

Top of the Page