ಐಲಾಂತಸ್ ಟ್ರೈಫೈಸ (Dennst.) Alston - ಸೈಮರೂಬೇಸಿ

ಪರ್ಯಾಯ ನಾಮ : ಐಲಾಂತಸ್ ಮಲಬಾರಿಕ DC.

Vernacular names : Tamil: ಧೂಪ್,ಮಟ್ಟಿ,ಮಟ್ಟಿಪಲ್,ಮಟ್ಟಿಪಲ,ಪೆರುಮರೊಮ್,ಪೊಂಗಲ್ಯಮ್Malayalam: ಗುಗ್ಗುಳ ಧೂಪ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದ ಛಾಯೆಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಬಣ್ಣದಲ್ಲಿದ್ದು ಕೆಂಪು ಮಚ್ಚೆಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು,ಉದುರಿದ ಎಲೆಗಳ ಗುರುತುಗಳ ಸಮೇತವಿರುತ್ತವೆ;ತುದಿಯಲ್ಲಿನ ಎಲೆಮೊಗ್ಗುಗಳು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಅಸಮಗರಿ ರೂಪಿಗಳಾಗಿರುತ್ತವೆ, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿ ಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು,ಉಪ-ದುಂಡಾಗಿರುತ್ತವೆ, ರೋಮರಹಿತ -ವಾಗಿರುತ್ತದೆ;ಉಪತೊಟ್ಟು 0.3-0.7 ಸೆಂ.ಮೀ.ವರೆಗಿನ ಉದ್ದವಿದ್ದು, ರೋಮರಹಿತ -ವಾಗಿರುತ್ತದೆ;ಉಪಪತ್ರಗಳು 11 ರಿಂದ 21 ಇದ್ದು, ಪರ್ಯಾಯವಾಗಿ ಅಥವಾ ಉಪಅಭಿಮುಖಿಯಾಗಿರುತ್ತವೆ, ಮತ್ತು ಮೇಲೆ ಹೋದಂತೆಲ್ಲಾ ಗಾತ್ರ ಹೆಚ್ಚುತ್ತಾ ಹೋಗುತ್ತದೆ,ಗಾತ್ರದಲ್ಲಿ 5-14 X 3 - 5 ಸೆಂ.ಮೀ. ಹೊಂದಿದ್ದು,ಅಂಡವೃತ್ತ-ಚತುರಸ್ರದಿಂದ ಚತುರಸ್ರ-ಭರ್ಜಿ ರೀತಿಯವರೆಗಿನ ಆಕಾರ,ಚೂಪಾದ ಅಥವಾ ಕ್ರಮೇಣ ಚೂಪಾಗುವ ತುದಿ,ಅಸಮ್ಮಿತಿಯಾದ ಬುಡ,ನಯವಾದ ಮತ್ತು ಹಿಂಸುರುಳಿಗೊಂಡ ಅಂಚು,ಮಾಸಲು ಬೂದು ಹಸಿರು ಬಣ್ಣವನ್ನು ಹೊಂದಿದ್ದು ಎಳೆಯದಾಗಿದ್ದಾಗ ದಟ್ಟ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 - 16 ಜೋಡಿಗಳಿದ್ದು, ಅಂಚಿನ ಬಳಿಯ ಕವಲುಗಳಲ್ಲಿ ರಸಗ್ರಂಥಿಗಳನ್ನು ಹೊಂದಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಪುನಾರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು ಜೋತಾಡುತ್ತಿರುತ್ತವೆ;ಹೂಗಳು ಸಣ್ಣ ಗಾತ್ರದಲ್ಲಿದ್ದು ಸಂಕೀರ್ಣಲಿಂಗಿಗಳಾಗಿರುತ್ತವೆ;ತೊಟ್ಟುಗಳು ಅಂದಾಜು 0.2 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಫಲಗಳು ಸಮಾರ ಮಾದರಿಯವುಗಳಾಗಿದ್ದು ಪೊರೆ ರೂಪದ ರೆಕ್ಕೆಗಳ ಸಮೇತವಿರುತ್ತವೆ;ಬೀಜಗಳ ಸಂಖ್ಯೆ 1, ಲೋಲಕವಾಗಿರುತ್ತದೆ.

ಜೀವಪರಿಸ್ಥಿತಿ :

1000 ಮೀ. ಎತ್ತರದ ಪ್ರದೇಶಗಳ ಅರೆ ನಿತ್ಯ ಹರಿದ್ವರ್ಣ ಮತ್ತು ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಆಸ್ಟ್ರೇಲಿಯ ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Trimen, Handb. Fl. Ceylon 6 (Suppl.) 41: 1931; Gamble, Fl. Madras 1: 163. 1997 (re. ed); Sasidharan, Biodiversity documentation for Kerala- Flowering Plants, part 6: 85. 2004.

Top of the Page