ಅಪೊರೋಸ ಬೋರ್ಡಿಲೋನಿ Stapf - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ.ವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳ ಸಮೇತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ. ತೊಟ್ಟುಗಳು 1.5 ಸೆಂ.ಮೀ. ವರೆಗಿನ ಉದ್ದವಿದ್ದು ದಟ್ಟ- ಮೃದು ತುಪ್ಪಳವನ್ನು ಹೊಂದಿರುತ್ತವೆ;ಪತ್ರಗಳು 15 X 5.5 ಸೆಂ. ಮೀ. ಗಾತ್ರ, ಚತುರಸ್ರ ಮಾದರಿಯ ಆಕಾರದಲ್ಲಿದ್ದು, ಬಾಲರೂಪಿ ತುದಿ , ದುಂಡಾದ ಅಥವಾ ಉಪ- ಚೂಪಾದ ಬುಡ ಹೊಂದಿರುತ್ತವೆ; ತಳಭಾಗದಲ್ಲಿನ ಮಧ್ಯ ನಾಳ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 7 - 9 ಜೋಡಿಗಳಿದ್ದು ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುತ್ತವೆ;ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು 1.5 ಸೆಂ.ಮೀ. ವರೆಗಿನ ಉದ್ದದ ಪುಷ್ಪದಳರಹಿತ ಏಕಲಿಂಗಿ ಹೂಗಳುಳ್ಳ ಕದಿರುಮಂಜರಿಗಳಲ್ಲಿರುತ್ತವೆ; ಹೆಣ್ಣು ಹೂಗಳು ಕಿರಿದಾದ ಕೆಲವೇ ಹೂಗಳುಳ್ಳ ಮಧ್ಯಾರಂಭಿ ಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 2 ಸೆಂ.ಮೀ ಉದ್ದವಿದ್ದು, ಅಂಡಾಕಾರ ಹೊಂದಿದ್ದು ಅಗ್ರದಲ್ಲಿ ಕೊಕ್ಕನ್ನು ಹೊಂದಿರುತ್ತವೆ ಹಾಗೂ ಮೃದುವಾದ,ಗಡುಸಾದ ತರಕಲು ಗುಬುಟುಗಳನ್ನು ಹೊಂದಿರುತ್ತವೆ ಮತ್ತು ದಟ್ಟ ಮೃದುತುಪ್ಪಳ ಸಮೇತವಿರುತ್ತವೆ; ಶಲಾಕಾಗ್ರ ಶಾಶ್ವತವಾಗಿದ್ದು 6 ದಬ್ಬಳದಾಕಾರದ ಹಾಲೆಗಳನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಕಡಿಮೆ ಎತ್ತರದ (200 ಮೀ.)ವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳು.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಪ್ರಭೇದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ..

ಸ್ಥಿತಿ :

ಅಳಿವಿನ ಆತಂಕಕಾರಿ ಸ್ಥಿತಿ (IUCN 2000).

ಗ್ರಂಥ ಸೂಚಿ :

Hooker, Ic. 23, t. 2204. 1892; Gamble, Fl. Madras 2: 1309. 1993 (re. ed); Sasidharan, Biodiversity documentation for Kerala- Flowering Plants, part 6: 409. 2004.

Top of the Page