ಆರ್ಡಿಸಿಯ ಬ್ಲ್ಯಾಟೆರಿ Gamble - ಮಿರ್ಸಿನೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ದಟ್ಟವಾದ ಶಲ್ಕೆಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 ರಿಂದ 1 ಸೆಂ.ಮೀ. ಉದ್ದ ಹೊಂದಿದ್ದು,ಕಾಲುವೆಗೆರೆ ಸಮೇತವಿದ್ದು ಎಳೆಯದಾಗಿದ್ದಾಗ ಶಲ್ಕೆಗಳ ಸಮೇತವಿರುತ್ತವೆ;ಪತ್ರಗಳು 5.5 - 11 X 3 – 5 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ – ಭರ್ಜಿಯಿಂದ ಅಂಡವೃತ್ತ- ಬುಗುರಿ-ಭರ್ಜಿಯ ಆಕಾರ ಹೊಂದಿದ್ದು, ಬಾಲರೂಪಿ-ಕ್ರಮೇಂ ಚೂಪಾಗುವ ತುದಿ,ಬೆಣೆಯಾಕಾರದ ಬುಡ ,ದುಂಡೇಣು ದಂತಿತ-ಗರಗಸ ಮಾದರಿಯ ಅಂಚು ಹೊಂದಿರುತ್ತವೆ,ಪತ್ರದ ತಳಭಾಗ ಪಾರದರ್ಶಕ ಚುಕ್ಕೆಗಳಿಂದ ಮತ್ತು ಶಲ್ಕೆಗಳಿಂದ ಕೂಡಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 14 ಜೋಡಿಗಳಿದ್ದು ಬಲಿಷ್ಠವಾಗಿರುತ್ತವೆ ಮತ್ತು ಪತ್ರಗಳ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ ಹಾಗೂ ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ಅಕ್ಷಾಕಂಕುಳಿನಲ್ಲಿನ ಅಥವಾ ಅಗ್ರದಲ್ಲಿನ ಪೀಠಛತ್ರ ಮಧ್ಯಾರಂಭಿ ಮಾದರಿಯವು ಹೂಗಳು ಬಿಳಿಯಿಂದ ನಸುಗೆಂಪು ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿರುತ್ತವೆ;ಬೀಜ ಒಂದು.

ಜೀವಪರಿಸ್ಥಿತಿ :

ಅತಿಎತ್ತರದ (ಅಂದಾಜು 1500 ಮೀ.ವರೆಗಿನ) ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯ ವರುಶುನಾಡು ಬೆಟ್ಟಗಳ ಮತ್ತು ಏಲಮಲೈ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN 2000).

ಗ್ರಂಥ ಸೂಚಿ :

Bull. Misc. Inform. Kew 1921:21;Gamble, Fl. Madras 2:755.1998 (rep.ed.); Sasidharan, Biodiversity documentation for Kerala- Flowering Plants, part 6:264.2004.

Top of the Page