ಬುಕನಾನಿಯ ಲ್ಯಾನ್ಸಿಯೋಲೇಟ Wt. - ಅನಕಾರ್ಡಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಪಪ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕೊಂಬೆ ಮತ್ತು ಕಿರುಕೊಂಬೆಗಳು ಗುಂಡಾಕೃತಿ ಹೊಂದಿದ್ದು, ರೋಮರಹಿತವಾಗಿರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆ ಯಲ್ಲಿ, ತಿರುಪು ರೂಪಿನಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ. ಎಲೆತೊಟ್ಟು ರೋಮರಹಿತ, 1 ರಿಂದ 5 ಸೆ.ಮೀ ಉದ್ದವಾಗಿದ್ದು, ಕಾಲುವೆ ಗೆರೆಗಳನ್ನು ಹೊಂದಿರುತ್ತವೆ. ಎಲೆಪತ್ರಗಳು 5-11.5 X 2- 3.5 ಸೆ.ಮೀ. ಗಾತ್ರ, ಭರ್ಜಿ ಅಥವಾ ಚತುರಸ್ರಾಕಾರದಲ್ಲಿದ್ದು, ಕ್ರಮೇಣ ಚೂಪಾಗುವ ಚಿಕ್ಕ ತುದಿ ಹಾಗೂ ಬೆಣೆಯಾಕಾರದ ಬುಡವನ್ನು ಹೊಂದಿರುತ್ತದೆ. ಎಲೆಗಳ ತಳಭಾಗ ರೋಮರಹಿತ. ಎರಡನೇ ದರ್ಜೆಯ ನಾಳಗಳು 10 -12 ಜೋಡಿಗಳಿದ್ದು, ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಿಂದ ಕೂಡಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಗ್ರಸ್ಥಾನದಲ್ಲಿ ಅಥವಾ ಅಕ್ಷಾಕಂಕುಳಿನಲ್ಲಿರುವ 5-7ಸೆಂ.ಮೀ. ಉದ್ದವಿರುವ, ಸೂಕ್ಶ್ಮವಾದ, ಕಿಲುಬು ಬಣ್ಣವುಳ್ಳ ದಟ್ಟ ಮೃದು ತುಪ್ಪಳದಿಂದ ಕೂಡಿದ ಪುನರಾವೃತ್ತಿಯಾಗಿ, ಕವಲೊಡೆದ ಮಾದರಿಯವು. ಹೂಗಳು ದ್ವಿಲಿಂಗಿ ಮತ್ತು ಹಳದಿ ಬಣ್ಣದವು;ಹೂ ತೊಟ್ಟು 0.5-1ಸೆಂ.ಮಿ ಉದ್ದವಿದ್ದು. ಮೃದುತುಪ್ಪಳದಿಂದ ಕೂಡಿರುತ್ತದೆ, ಪುಷ್ಪಪಾತ್ರೆ ಅಂಡಾಕಾರದಲ್ಲಿದ್ದು, ಮ್ರುದುತುಪ್ಪಳಮಯವಾಗಿರುತ್ತದೆ.ಪುಷ್ಪದ ದಳಗಳು ರೋಮರಹಿತವಾಗಿದ್ದು, ಹಿಂದಕ್ಕೆ ಬಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು 1.5ಸೆಂ.ಮಿ. ಅಗಲವಿದ್ದು,ಚಪ್ಪಟೆ ಹಾಗೂ ರೋಮರಹಿತವಾಗಿದ್ದು,ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟಕ್ಕಿಂತ ಕೊಂಚ ಎತ್ತರವಿರುವ ನಿತ್ಯ ಹರಿದ್ವರ್ಣ ಹಾಗೂ ಅರೆ ನಿತ್ಯ ಹರಿದ್ವರ್ಣ ಕಾಡುಗಳ ಒಳ ಅಂತಸ್ತಿನಲ್ಲಿ ಅಪರೂಪವಾಗಿ ಕಾಣ ಸಿಗುತ್ತದೆ.

ವ್ಯಾಪನೆ :

ಭಾರತದ ಪಶ್ಚಿಮ ಘಟ್ಟದ ದಕ್ಷಿಣ ಮಲಬಾರು ಹಾಗೂ ದಕ್ಷಿಣ ಸಹ್ಯಾದ್ರಿಯ ಪ್ರದೇಶಗಳಲ್ಲಿಹಾಗೂ ಮ್ಯಾನ್ಮಾರ್ ದೇಶದಲ್ಲಿ ಬೆಳೆಯುತ್ತದೆ

ಸ್ಥಿತಿ :

ದುರ್ಬಲ ಸ್ಥಿತಿ (IUCN 2000)

ಗ್ರಂಥ ಸೂಚಿ :

Wight, Ic. t. 237. 1839 & Illustr.1: 185; Gamble, Fl. Madras 1: 259. 1997 (re. ed); Sasidharan, Biodiversity documentation for Kerala- Flowering Plants, part 6: 111. 2004.

Top of the Page