English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 30ಮೀ ಎತ್ತರದವರೆಗೆ ಬೆಳೆಯುವ ಮರಗಳು. |
ಕಾಂಡ ಮತ್ತು ತೊಗಟೆ : | ಹೊರ ತೊಗಟೆ ಹಳದಿ ಬಣ್ಣದಲ್ಲಿದ್ದು ಬಲಿಷ್ಠವಾದ ದೋಣಿಯಾಕಾರದ ಸೀಳಿಕೆಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ. |
ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ನಾಲ್ಕು ಕೋನಗಳನ್ನು ಹೊಂದಿರುತ್ತವೆ ಹಾಗೂ ಒಣಗಿದಾಗ ಹಳದಿ ಬಣ್ಣದಲ್ಲಿರುತ್ತವೆ. |
ಜಿನುಗು ದ್ರವ : | ಸಸ್ಯರಸ ಜಲರೂಪಿಯಾಗಿದ್ದು ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ ಹಾಗೂ ಅಂಟು ಸ್ವರೂಪದ್ದಾಗಿರುತ್ತದೆ. |
ಎಲೆಗಳು : | ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ತೆ ಯಲ್ಲಿದ್ದು 0.3 ರಿಂದ 0.5 ಸೆಂ.ಮೀ ಉದ್ದದ ಎಲೆತೊಟ್ಟುಗಳನ್ನು ಹೊಂದಿರುತ್ತವೆ; ಕಿರುತೊಟ್ಟುಗಳು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿದ್ದು ರೋಮರಹಿತ-ವಾಗಿರುತ್ತವೆ; ಎಲೆಪತ್ರಗಳು 4-8 X 2-4.5 ಸೆಂ.ಮೀ ಗಾತ್ರ ಹೊಂದಿದ್ದು, ಸಾಮಾನ್ಯವಾಗಿ ಬುಗುರಿಯಾಕಾರದಿಂದ ಬುಗುರಿ-ಭರ್ಜಿ ಆಕಾರದಲ್ಲಿರುತ್ತವೆ; ಎಲೆ ತುದಿ ದುಂಡಾಕಾರದಿಂದ ದುಂಡಾಕಾರದ ತುದಿಯಲ್ಲಿ ತಗ್ಗುಳ್ಳ ಮಾದರಿಯಲ್ಲಿದ್ದು, ಎಲೆಯ ಬುಡ ದುಂಡಾದ ಅಥವಾ ಉಪ-ಛಿನ್ನಾಗ್ರ ರೂಪದ್ದಾಗಿರುತ್ತದೆ, ಎಲೆಗಳು ತೊಗಲನ್ನೋಲುವ ಮಾದರಿ-ಯಲ್ಲಿದ್ದು, ಮೇಲ್ಭಾಗದಲ್ಲಿ ಹೊಳಪನ್ನು ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು ಬಹುಸಂಖ್ಯೆಯಲ್ಲಿದ್ದು, ಕಡಿಮೆ ಅಂತರದಲ್ಲಿದ್ದು ಸಮಾಂತರದಲ್ಲಿರುತ್ತವೆ ಹಾಗೂ ಎಲೆಯ ದಪ್ಪವಾದ ಅಂಚಿನಲ್ಲಿ ಕೊನೆಗೊಳ್ಳುತ್ತವೆ; |
ಪುಷ್ಪಮಂಜರಿ/ಹೂಗಳು : | ಹೂಗಳು ಶ್ವೇತ ವರ್ಣ ಹೊಂದಿದ್ದು ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ. |
ಕಾಯಿ /ಬೀಜ : | ಡ್ರೂಪ್ ಗಳು ಹಳದಿ ಮಿಶ್ರಿತ ಕಂದು ಬಣ್ಣ ಹೊಂದಿದ್ದು ಅಂಡಾಕಾರದಿಂದ ಅಂಡವೃತ್ತಾಕೃತಿಯಲ್ಲಿದ್ದು, 1.5 ಸಂ ಮೀ ಉದ್ದವಿದ್ದು ಒಂದು ಬೀಜವನ್ನೊಳ-ಗೊಂಡಿರುತ್ತವೆ. |