ಕ್ಯಾಂತಿಯಮ್ ಡೈಕಾಕಮ್ (Gaertn.) Teys. & Binn. var. ಅಂಬೆಲ್ಲೇಟಮ್ (Wt.) Sant. & Merch. - ರೂಬಿಯೇಸಿ

ಪರ್ಯಾಯ ನಾಮ : ಕ್ಯಾಂತಿಯಮ್ ಅಂಬೆಲ್ಲೇಟಮ್ Wt.; ಪ್ಲೆಕ್ಟ್ರೋನಿಯ ಡೈಡೈಮ (Gaertn. f.) Kurz var. ಅಂಬೆಲ್ಲೇಟ (Wt.) Gamble ; ಸೈಡ್ರ್ಯಾಕ್ಸ್ ಅಂಬೆಲ್ಲೇಟ (Wt.) Bridson

Vernacular names : Tamil: ನನ್ಯುಲ್Malayalam: ಅಬಲು,ಬಿಳಚಿ,ಹೆದ್ದರಾಣಿಕೆ,ಕೊರ್ಲ,ಒಪ್ಪೆಲೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ,ಅನಿಯತ ಸೀಳಿಕಾ ಮಾದರಿಯಲ್ಲಿದ್ದು ಬಲಿತಾಗ ಚಕ್ಕೆ ರೂಪದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಸಾಮಾನ್ಯವಾಗಿ 4- ಕೋನಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇದ್ದು ವಿಶಾಲವಾದ ಬುಡ ಭಾಗವುಳ್ಳ ರೇಖಾತ್ಮಕದ ಆಕಾರದಲ್ಲಿರುತ್ತವೆ; ತೊಟ್ಟು 0.6 – 1 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 6 -15 X 2.5–7 ಸೆಂ.ಮೀ. ಗಾತ್ರ,ಅಂಡವೃತ್ತದ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಬೆಣೆಯಾಕಾರದ ಬುಡ, ನಯವಾದ ಅಂಚು, ತೊಗಲ್ಲನ್ನೋಲುವ ಮೇಲ್ಮೈ ಹೊಂದಿರುತ್ತವೆ, ಪತ್ರದ ಮೇಲ್ಭಾಗ ಹೊಳಪನ್ನು ಹೊಂದಿದ್ದು ತಳಭಾಗ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 4-7 ಜೋಡಿಗಳಿದ್ದು ಅಕ್ಷಾಕಂಕುಳಿನಲ್ಲಿ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಮಧ್ಯಾರಂಭಿ ಮಾದರಿಯವು.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದವು;ತೊಟ್ಟು 1.5 ಸೆಂ.ಮೀ. ಉದ್ದವಿರುತ್ತವೆ.

ಜೀವಪರಿಸ್ಥಿತಿ :

1900 ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣದವರೆಗಿನ ಕಾಡುಗಳ ಒಳಚಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Bull. Bot. Surv. India 3: 107. 1961; Gamble, Fl. Madras 2: 624. 1993 (re. ed); Bridson, Kew Bull. 48: 762. 1993; Sasidharan, Biodiversity documentation for Kerala- Flowering Plants, part 6: 233. 2004; Almeida, Fl. Maharashtra 3:55. 2001.

Top of the Page