ಚಿಯೊನ್ಯಾನ್ತಸ್ ಲಿನೋಸಿಯರಾಯ್ಡಿಸ್ (Wt.) Bennet & Raizada - ಓಲಿಯೇಸಿ

ಪರ್ಯಾಯ ನಾಮ : ಓಲಿಯ ಲಿನೋಸಿಯರಾಯ್ಡಿಸ್ Wt.;ಲಿನೋಸಿಯೆರ ವೈಟಿಯೈ Cl.

Vernacular names : Tamil: ಕಾಟ್ಟುಚೆಕ್ಲಾತಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಎಲೆತೊಟ್ಟುಗಳು ಅಂದಾಜು 0.3 ಸೆಂ.ಮೀ.ಉದ್ದವಿದ್ದು ,ಕಾಲುವೆ ಗೆರೆಯನ್ನು ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 6-11.6X 3.2-4 ಸೆಂ.ಮೀ. ಗಾತ್ರ, ಅಂಡವೃತ್ತ, ಅಂಡವೃತ್ತ-ಚತುರಸ್ರದವರೆಗಿನ ಆಕಾರ, ಬಾಲರೂಪಿ ತುದಿ,ಚೂಪಾದ ಅಥವಾ ಒಳಬಾಗಿದ ಬುಡ, ನಯವಾದ ಅಂಚು, ರೋಮರಹಿತವಾದ ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಮತ್ತು ಒಣಗಿದಾಗ ಮಬ್ಬು ಹಳದಿ ಛಾಯೆಯುಳ್ಳ ಹಸಿರು ಬಣ್ಣದಲ್ಲಿರುತ್ತವೆ; ಮಧ್ಯನಾಳ ಸ್ವಲ್ಪಮಟ್ಟಿಗೆ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 6 ಜೋಡಿಗಳಿದ್ದು ತೆಳುವಾಗಿರುತ್ತವೆ ಮತ್ತು ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುವುದರಿಂದ ಹಿಡಿದು ಅಸ್ಪಷ್ಟವಾಗಿರುವರೆಗಿನ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯಲ್ಲಿದ್ದು 4 ಸೆಂ.ಮೀ. ವರೆಗಿನ ಉದ್ದ ಹೊಂದಿರುತ್ತವೆ.ಹೂಗಳ ಬಣ್ಣ ಬಿಳಿ.
ಕಾಯಿ / ಬೀಜ : ಡ್ರೂಪ್ಗಳು 1.3 ಸೆಂ.ಮೀ. ಉದ್ದವಿದ್ದು ಅಂಡಾಕಾರದಲ್ಲಿದ್ದು ನಯವಾಗಿರುತ್ತವೆ; ಬೀಜ ಒಂದು.

ಜೀವಪರಿಸ್ಥಿತಿ :

300 ಮತ್ತು 700 ಮೀ. ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿಯ ಅಗಸ್ತ್ಯಮಲೈ ಬೆಟ್ಟಗಳಲ್ಲಿ ವ್ಯಾಪಿಸಿದೆ.

ಸ್ಥಿತಿ :

ಉಳಿವಿನ ಾತಂಕಕಾರಿ ಸ್ಥಿತಿ(IUCN,2000).

ಗ್ರಂಥ ಸೂಚಿ :

Indian J. For. 4:68.1981;Gamble, Fl. Madras 2:794.1993(rep.ed.) ;Sasidharan,Biodiversity documentation for Kerala- Flowering Plants,part 6:275.2004.

Top of the Page