ಕ್ರೈಸೋಫಿಲ್ಲಮ್ ರಾಕ್ಸ್ಬರ್ಗಿಯೈ Don - ಸಪೋಟೇಸಿ

ಪರ್ಯಾಯ ನಾಮ : ಕ್ರೈಸೋಫಿಲ್ಲಮ್ ಲ್ಯಾನ್ಸಿಯೋಲೇಟಮ್ (Bl.)DC.

Vernacular names : Tamil: ನೂಲಂಬಳಮ್,ಪುಳಿಚಕ್ಕ,ಆತ,ಅತಪಾಲMalayalam: ಹನ್ನಾಲೆ,ಕಪ್ಪಾಲೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗಿನ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಬೂದು ಬಣ್ಣದಲ್ಲಿದ್ದು ಉದ್ದನೆಯ ಸಾಲಿನಲ್ಲಿ ಜೋಡಿತವಾದ ಬೆಂಡುರೂಪದ ವಾಯುವಿನಿಮಯ ರಂಧ್ರಗಳನ್ನು ಹೊಂದಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ,ನಂತರ ರೋಮರಹಿತವಾಗುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟು 0.5 – 0.8 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆಯನ್ನು ಹೊಂದಿದ್ದು ಎಳೆಯದಾಗಿದ್ದಾಗ ಮೃದುತುಪ್ಪಳ ಸಹಿತವಿದ್ದು ನಂತರ ರೋಮರಹಿತವಾಗಿರುತ್ತದೆ; ಪತ್ರಗಳು 7 -15 X 2–4 ಸೆಂ.ಮೀ. ಗಾತ್ರ,ಸಂಕುಚಿತ ಚತುರಸ್ರದಿಂದ ಅಂಡವೃತ್ತ-ಚತುರಸ್ರದವರೆಗಿನ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಬಾಲರೂಪಿ- ಕ್ರಮೇಣ ತುದಿ,ಕೊಂಚ ಅಸಮ್ಮಿತಿಯಾದ ಮತ್ತು ಒಳಬಾಗಿದ ಬುಡ, ತರಂಗಿತವಾದ ಅಂಚು,ಉಪ- ತೊಗಲನ್ನೋಲುವ ಮತ್ತು ಹೊಳಪನ್ನುಳ್ಳ ಮೇಲ್ಮೈ ಹೊಂದಿದ್ದು ಬಲಿತಾಗ ರೋಮರಹಿತವಾಗಿರುತ್ತವೆ ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ; ಎರಡನೇ ದರ್ಜೆಯ ನಾಳಗಳು ಹಲವಾರು ಇದ್ದು,ಕಡಿಮೆ ಅಂತರ ಹೊಂದಿರುತ್ತವೆ ಮತ್ತು ಎರಡನೇ ದರ್ಜೆಯ ನಡುವಿನ ನಾಳಗಳಿಗೆ ಸಮಾನಾಂತರವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ದಟ್ಟವಾದ ಗುಚ್ಛಗಳಲ್ಲಿರುತ್ತವೆ;ಹೂಗಳು ಬಿಳಿ ಬಣ್ಣ ಹೊಂದಿರುತ್ತವೆ;ತೊಟ್ಟುಗಳು 0.3 – 0.5 ಸೆಂ.ಮೀ ಉದ್ದವಿರುತ್ತವೆ.
ಕಾಯಿ / ಬೀಜ : ಬೆರ್ರಿ ಗೋಳಾಕಾರದಲ್ಲಿದ್ದು, 2.5 – 3.5 ಸೆಂ.ಮೀ ಅಡ್ಡಗಲತೆ ಹೊಂದಿದ್ದು, 5 – 6 ಕೋಶಗಳ ಸಮೇತವಿರುತ್ತವೆ;ಬೀಜಗಳು 1 ಇದ್ದು,ಕಂದು ಬಣ್ಣದಲ್ಲಿದ್ದು ಹೊಳಪನ್ನು ಹೊಂದಿರುತ್ತವೆ ಮತ್ತು 1.9 ಸೆಂ.ಮೀ.ವರೆಗಿನ ಉದ್ದವಿರುತ್ತವೆ.

ಜೀವಪರಿಸ್ಥಿತಿ :

1400 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಉಷ್ಣವಲಯದ ಏಷ್ಯಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Don, Gen. Hist. 4: 33. 1837-1838; Gamble, Fl. Madras 2: 758. 1993 (re.ed.); Sasidharan, Biodiversity documentation for Kerala- Flowering Plants, part 6: 267. 2004; Saldanha, Fl. Karnataka 1: 327.1984; Cooke, Fl. Bombay 2: 89.1908.

Top of the Page