ಸಿನ್ನಮೋಮಮ್ ಹೇನಿಯಾನಮ್ Nees - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ.ವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ಸೂಕ್ಷ್ಮ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಅಭಿಮುಖ ಅಥವಾ ಉಪಅಭಿಮುಖ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ;ತೊಟ್ಟುಗಳು 0.5 -0.8 ಸೆಂ.ಮೀ. ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟಪೀನ ಮಧ್ಯ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 3.5-10 X 1.2-2 ಸೆಂ.ಮೀ ಗಾತ್ರ ಹೊಂದಿದ್ದು ರೇಖಾತ್ಮಕ-ಭರ್ಜಿ ಆಕಾರದಲ್ಲಿರುತ್ತವೆ. ಪತ್ರದ ತುದಿ ಸಂಕುಚಿತ ಚೂಪಿನಿಂದ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ;ಬುಡ ಚೂಪಾಗಿರುತ್ತದೆ;ಪತ್ರಗಳ ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿದ್ದು ಪತ್ರದ ತಳಭಾಗ ಎಳೆಯದಾಗಿದ್ದಾಗ ವಿರಳವಾದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತದೆ;ಪತ್ರಗಳು 3-ನಾಳಗಳನ್ನು ಹೊಂದಿದ್ದು ಅಗ್ರ ಆಧಾರದ ಸ್ಥಿತಿಯಲ್ಲಿರುತ್ತವೆ;ಪಾರ್ಶ್ವ ನಾಳಗಳು ಅಗ್ರವನ್ನು ತಲುಪುವುದಿಲ್ಲ;ಮೂರನೇ ದರ್ಜೆಯ ನಾಳಗಳು ಮಂದವಾಗಿ ಕಾಣುತ್ತವೆ ಮತ್ತು ಲಂಬ ರೇಖೆಗೆ ಸಮಕೋನ -ದಲ್ಲಿರುತ್ತವೆ ಹಾಗೂ ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು. ಉನ್ನತ ದರ್ಜೆಯ ನಾಳಗಳು ತೀರಾ ಸನಿಹವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಹಾಗೂ ತೆಳುವಾದ ಪುಷ್ಪಮಂಜರಿಯಲ್ಲಿ ಕೆಲವು ಹೂಗಳಿರುತ್ತವೆ;
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತಾಕಾರದಲ್ಲಿದ್ದು 1 ಸೆಂ.ಮೀ. ಉದ್ದವನ್ನು ಹೊಂದಿರುತ್ತವೆ; ಕಾಯಿಗಳ ಪುಷ್ಪಪಾತ್ರೆ ಆಳ ಹೊಂದಿರುವುದಿಲ್ಲ ದಳಗಳು ಶಾಶ್ವತವಾಗಿದ್ದು ಅಂಡಾಕಾರದಲ್ಲಿದ್ದು 0.4 ಸೆಂ. ಮೀ.ಉದ್ದ ಹೊಂದಿರುತ್ತವೆ; ಬೀಜ 1.

ಜೀವಪರಿಸ್ಥಿತಿ :

ಕಡಿಮೆ ಎತ್ತರದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ನದಿಗಳ ಬದಿಯಲ್ಲಿ ಬೆಳೆಯುವ ಈ ಪ್ರಭೇದ ಅಪರೂಪವಾಗಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದವನ್ನು ದಕ್ಷಿಣ ಸಹ್ಯಾದ್ರಿಯ (ಪುಯಂಕುಟ್ಟಿ ನದಿ(ಮಲಯತೂರ್ ವಿಭಾಗ) ಮತ್ತು ಮಧ್ಯಸಹ್ಯಾದ್ರಿ ಪ್ರದೇಶದ ಕೊಡಗು ಪ್ರದೇಶಗಳಿಂದ ದಾಖಲಿಸಲಾಗಿದೆ.

ಗ್ರಂಥ ಸೂಚಿ :

Wall., Pl. As.. Rar. 2:76.1831;Bull. Bot. Surv. India 25:96.1983; Keshava Murthy and Yoganarasimhan, Fl. Coorg(Kodgu) 382. 1990.

Top of the Page