ಸಿನ್ನಮೋಮಮ್ ಮ್ಯಾಕ್ರೋಕಾರ್ಪಮ್ J. Hk. - ಲಾರೇಸಿ

Synonym : ಸಿನ್ನಮೋಮಮ್ ಇನೆರ್ಸ್ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗಳುಳ್ಳ 15 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಮಂದವಾದ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ .
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಅಭಿಮುಖದಿಂದ ಉಪಅಭಿಮುಖವರೆಗಿನ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ;ತೊಟ್ಟುಗಳು ದೃಢವಾಗಿದ್ದು 1 - 2.5 ಸೆಂ.ಮೀ. ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟಪೀನ ಮಧ್ಯ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 7-18 x 2.5-7.5 ಸೆಂ.ಮೀ.ಗಾತ್ರ ಹೊಂದಿದ್ದು ಅಂಡದಿಂದ ಅಂಡ-ಭರ್ಜಿ ಆಕಾರದಲ್ಲಿರುತ್ತವೆ. ಪತ್ರದ ತುದಿ ಚೂಪಲ್ಲದ ಮಾದರಿಯ- ಲ್ಲಿರುತ್ತದೆ;ಬುಡ ಒಳಬಾಗಿದ ರೀತಿಯಲ್ಲಿರುತ್ತದೆ;ಪತ್ರಗಳ ಮೇಲ್ಮೈ ತೊಗಲನ್ನೊಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ;ಪತ್ರಗಳು 3 ಅಗ್ರ-ಆಧಾರ ನಾಳಗಳನ್ನು ಹೊಂದಿದ್ದು ಪಾರ್ಶ್ವ ನಾಳಗಳು ಎಲೆಯ ಅಗ್ರವನ್ನು ತಲುಪುವುದಿಲ್ಲ;ಮಧ್ಯ ನಾಳ ಮೇಲೆದ್ದಿರುತ್ತದೆ;ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ ಹಾಗೂ ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು. ಉನ್ನತ ದರ್ಜೆಯ ನಾಳಗಳು ತೀರಾ ಸನಿಹದಲ್ಲಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಹಾಗೂ ಹಲವು ವೇಳೆ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ಮತ್ತು ಸಡಿಲ ರೀತಿಯಲ್ಲಿರುತ್ತವೆ ಮತ್ತು 7 ಸೆಂ.ಮೀ. ಉದ್ದ ಹೊಂದಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತಾಕಾರದಲ್ಲಿದ್ದು 2.5 ಸೆಂ.ಮೀ. ಉದ್ದವನ್ನು ಹೊಂದಿರುತ್ತವೆ; ಕಾಯಿಗಳ ಪುಷ್ಪಪಾತ್ರೆಯ ಬಟ್ಟಲು ಮಾಂಸಲವಾಗಿದ್ದು 1.5 ಸೆಂ.ಮೀ. ಉದ್ದವಿದ್ದು ವಿಸ್ತಾರಗೊಳ್ಳದ ದಳಗಳ ಅವಶೇಷಗಳ ಸಮೇತವಿರುತ್ತವೆ;ಬೀಜ 1.

ಜೀವಪರಿಸ್ಥಿತಿ :

900 ರಿಂದ 2000 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಗಳಲ್ಲಿ ಅಪರೂಪವಾಗಿ ಬೆಳೆಯುತ್ತದೆ.

ಗ್ರಂಥ ಸೂಚಿ :

Hooker, Fl. Brit.India 5: 133.1886;Bull. Bot. Surv. India 25:100.1983; Gamble,Fl.Madras 2:1225. 1993(rep.ed.);Sasidharan, Biodiversity documentation for Kerala Flowering Plants, part 6: 396. 2004;Saldanha, Fl. Karnataka 1:60.1996.

Top of the Page