ಕ್ಳಸೀನ ಇಂಡಿಕ (Dalz.) Oliver - ರೂಟೇಸಿ

Vernacular names : ತಮಿಳು: ನನ, ಕರಿವೆಪ್ಪಿಲೈ, ಕಟ್ಟ - ವೆಪ್ಪಿಲೈ ಕಾಟ್ಟುಮುಂತಿರೈ, ಗೊರಕೊಟ್ಟ, ಕಾಟ್ಟುಕರುವೆಪ್ಪು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದವರೆಗಿನ ಸಣ್ಣಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಬಿಳಿ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಊದುರು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ, ಅಸಮ ಸಂಖ್ಯೆ ಏಕಗರಿ ರೂಪಿ ಮಾದರಿಯಲ್ಲಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ದುಂಡಾಗಿದ್ದು,ಉಬ್ಬಿದ ಬುಡವನ್ನು ಹೊಂದಿರುತ್ತವೆ ಮತ್ತು ಎಳೆಯದಾಗಿದ್ದಾಗ ಉದುರು ರೋಮಗಳ ಸಹಿತವಾಗಿರುತ್ತವೆ;ಉಪತೊಟ್ಟುಗಳು 0.3 – 0.5 ಸೆಂ.ಮೀ ಉದ್ದ ಹೊಂದಿರುತ್ತವೆ;ಕಿರುಪತ್ರಗಳು 7 ರಿಂದ 13 ಇದ್ದು, ಪರ್ಯಾಯವಾಗಿ ಜೋಡಿತಗೊಂಡಿರುತ್ತವೆ,2.5-6.5 X 1.7 – 3.5 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡ - ಅಂಡವೃತ್ತದ ಆಕಾರದಲ್ಲಿದ್ದು ಅಸಮವಾದ ಪಾರ್ಶ್ವಗಳನ್ನು ಹೊಂದಿರುತ್ತವೆ,ತುದಿ ಕ್ರಮೇಣ ಚೂಪಾಗುವವರೆಗಿನ ರೀತಿಯಲ್ಲಿದ್ದು ದುಂಡಗಿನ ಅಗ್ರದಲ್ಲಿ ತಗ್ಗನ್ನು ಹೊಂದಿರುತ್ತದೆ, ಬುಡ ಅಸಮಪಾರ್ಶ್ವತೆ ಹೊಂದಿರುತ್ತದೆ, ಅಂಚು ಸೂಕ್ಷ್ಮ ದುಂಡೇಣಿನ ದಂತಗಳ ಮಾದರಿಾಗಿರುತ್ತದೆ, ಪತ್ರಗಳು ರೋಮರಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 5-8 ಜೋಡಿಗಳಿರುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ನೀಳಛತ್ರ ಮಾದರಿಯವು;ಹೂಗಳು ಬಿಳಿ ಬಣ್ಣದವುಗಳಾಗಿದ್ದು ಹೂಗಳ ಭಾಗಗಳು 5 ಸಂಖ್ಯೆಯ ಗುಣಕದಲ್ಲಿರುತ್ತವೆ;ತೊಟ್ಟುಗಳು 0.4 ಸೆಂ.ಮೀವರೆಗಿನ ಉದ್ದವನ್ನು ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರ ಹೊಂದಿದ್ದು 1.3 ಸೆಂ .ಮೀ. ವರೆಗಿನ ಅಡ್ಡಗಲತೆ ಹೊಂದಿರುತ್ತವೆ;ಬೀಜಗಳ ಸಂಖ್ಯೆ 1.

ಜೀವಪರಿಸ್ಥಿತಿ :

600 ರಿಂದ 1300 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀಲಂಕಾ ;ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಅಪರೂಪವಾಗಿ ಮತ್ತು ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಆಗಾಗ್ಗೆ ಕಂಡು ಬರುತ್ತದೆ.

ಗ್ರಂಥ ಸೂಚಿ :

Oliver, J. Linn. Soc. Bot. 5: 36. 1861; Gamble, Fl. Madras 1: 155. 1997 (re. ed); Sasidharan, Biodiversity documentation for Kerala- Flowering Plants, part 6: 80. 2004; Cook, Fl. Bombay 1: 183.1903; Almeida, Fl. Maharashtra 1:205. 1996.

Top of the Page