ಕಾಕ್ಯುಲಸ್ ಲಾರಿಫೋಲಿಯಸ್ DC. - ಮೆನಿಸ್ಪರ್ಮೇಸಿ

:

Vernacular names : Tamil: ಮರ್ಪಿಂಕಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಪೊದೆಗಳು ಅಥವಾ 6 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಆಳವಿಲ್ಲದ ಜಾಲಬಂಧ ಸೀಳಿಕಾ ಮಾದರಿಯವು; ಕಚ್ಚು ಮಾಡಿದ ಜಾಗ ಬಿಳಿ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ವಿರಳವಾದ ರೋಮಸಹಿತವಾಗಿದ್ದುಬಲಿತಾಗ ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ತೊಟ್ಟುಗಳು 0.7 ಸೆಂ.ಮೀ.ಉದ್ದವಿದ್ದು ಕಾಲುವೆ ಗೆರೆ ಸಮೇತವಿರುತ್ತವೆ ಹಾಗೂ ರೋಮ ರಹಿತವಾಗಿರುತ್ತವೆ;ಪತ್ರಗಳು 3.3-10.3 X1.7- 3.5 ಸೆಂ. ಮೀ.ವರೆಗಿನ ಗಾತ್ರ, ಚತುರಸ್ರ – ಬುಗುರಿ - ಈಟಿಯ ಆಕಾರ, ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವುದರಿಂದ ತುದಿ ,ಚೂಪಾದ – ಬೆಣೆಯಾಕಾರದ ಬುಡ,ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ,ಹೊಳಪುಳ್ಳ ಮೇಲ್ಭಾಗ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿಮೇಲೆದ್ದಿರುತ್ತದೆ; ನಾಳಗಳು 3;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು; ಹೂಗಳು ಏಕ ಲಿಂಗಿಗಳು;ಗಂಡು ಹೂಗಳು ಹಳದಿ ಬಣ್ಣ ಹೊಂದಿರುತ್ತವೆ;ಹೆಣ್ಣು ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣದವು.
ಕಾಯಿ / ಬೀಜ : ಡ್ರೂಪ್ಗಗಳು ಅದುಮಿದ ಆಕಾರದಲ್ಲಿದ್ದು ಅಂದಾಜು 0.6 ಸೆಂ.ಮೀ.ಅಡ್ಡಗಲತೆ ಹೊಂದಿದ್ದು ರೋಮರಹಿತವಾಗಿರುತ್ತವೆ, ಎರಡೂ ತುದಿಯಲ್ಲಿ ಕುಗ್ಗಿರುತ್ತದೆ;ಬೀಜಗಳು 1.

ಜೀವಪರಿಸ್ಥಿತಿ :

1200 ಮತ್ತು1600ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ಒಣ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತುಪೂರ್ವ ಏಷ್ಯಾ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Syst. Nat. 1: 530.1817;Gamble, Fl. Madras 1:29.1997(rep.ed.) ; Sasidharan, Biodiversity documentation for Kerala- Flowering Plants, part 6:91.2004.

Top of the Page