ಕೊರಿಫ ಅಂಬ್ರಾಕ್ಯುಲಿಫೆರ L. - ಅರೆಕೇಸಿ

ಕನ್ನಡದ ಪ್ರಾದೇಶಿಕ ಹೆಸರು : ಶ್ರೀತಾಳೆ, ಬೀಸಣಿಗೆಮರ, ಕೊಡೆತಾಳೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20ಮೀ ಎತ್ತರದವರೆಗೆ ಬೆಳೆಯುವ ತಾಳೆ ಅಥವಾ ತೆಂಗು ಸಂಬಂಧಿ ಮರ
ಕಾಂಡ ಮತ್ತು ತೊಗಟೆ : ಕಾಂಡವು ವಲಯಾಕಾರದ ಎಲೆಯುದುರು ಗುರುತುಗಳನ್ನು ಹೊಂದಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಹಸ್ತರೂಪಿ ಸಂಯುಕ್ತ ಗರಿ ಮಾದರಿಯವು. ಆಕಾರದಲ್ಲಿ ವೃತ್ತಾಕಾರ ಅಥವಾ ಅರೆ ಚಂದ್ರಕಾರ ಹೊಂದಿರುತ್ತವೆ. ಸಂಯುಕ್ತ ಎಲೆಗಳ ನಡುಕಾಂಡ ಧೃಡವಾಗಿದ್ದು ನಿನ್ನ ಮಧ್ಯ ಅಥವಾ ಪುಟಾಕಾರ ಹೊಂದಿದ್ದು, ಅಂಚುಗಳು ಮುಳ್ಳು ಸಮೇತವಿರುತ್ತವೆ. ಪತ್ರಗಳು ಮಡಿಕೆಗಳನ್ನೊಳಗೊಂಡಿರುತ್ತವೆ. ಅಂದಾಜು ಮಧ್ಯಭಾಗದಿಂದ ಪತ್ರ ಒಡಕುಗೊಂಡು 80 ರಿಂದ 100 ರೇಖಾತ್ಮಕ ಭರ್ಜಿಯಾಕಾರದ ದ್ವಿವಿಭಾಗಗೊಂಡ ಹಾಲೆಗಳಾಗಿ ಮಾರ್ಪಡಿಸಲ್ಪ-ಟ್ಟಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ತುದಿಯಲ್ಲಿನ ನೇರವಾಗಿದ್ದು ಹೊಂಬಾಳೆ ಮಂಜರಿರೂಪದವಾಗಿದ್ದು ಕವಲುಗಳನ್ನೊಳಗೊಂಡು, ಪಿರಮಿಡ್ ಆಕಾರದಲ್ಲಿದ್ದು ಹಲವಾರು ಕೊಳವೆಯಾಕಾರದ ಆವರಣಪತ್ರಕಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ. ಬೀಜದ ಸುತ್ತ ಆಲ್ಬ್ಯುಮಿನ್ ಇರುವುದಿಲ್ಲ.

ಜೀವಪರಿಸ್ಥಿತಿ :

600ಮೀ ಎತ್ತರದವರೆಗಿನ ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡುಬರುತ್ತವೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಪ್ರದೇಶ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿ ಉತ್ತರಕನ್ನಡ ಜಿಲ್ಲೆಯ ಯಾಣದಲ್ಲಿ ಈ ಪ್ರಬೇಧ ನೈಸರ್ಗಿಕವಾಗಿ ಬೆಳೆಯುತ್ತದೆ.

ಗ್ರಂಥ ಸೂಚಿ :

Sp. Pl. (ed. 2) 1657. 1763; Gamble, Fl. Madras 3: 1561.1998 (re.ed); Cooke, Fl. Bombay 1:808. 1902; Sasidharan, Biodiversity documentation for Kerala- Flowering Plants, part 6: 506. 2004.

Top of the Page