ಕ್ರೋಟಾನ್ ಮಲಬಾರಿಕಸ್ Bedd. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ನಕ್ಷತ್ರ-ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಗಳು ರೇಖಾತ್ಮಕ ರೂಪಿಗಳಾಗಿರುತ್ತವೆ ಹಾಗೂ ಉದುರಿ ಹೋಗುತ್ತವೆ;ತೊಟ್ಟುಗಳು 3 -11 ಸೆಂ.ಮೀ. ಉದ್ದವಿದ್ದು ದುಂಡಾಗಿರುತ್ತವೆ ಮತ್ತು ನಕ್ಷತ್ರರೂಪಿ ಶಲ್ಕೆಗಳಿಂದ ಕೂಡಿರುತ್ತವೆ; ಪತ್ರಗಳು 7.5 – 15.5 X 3.8 – 10.5 ಸೆಂ. ಮೀ. ಗಾತ್ರ, ವಿಶಾಲವಾದ ಅಂಡವೃತ್ತಾಕಾರದಿಂದ ಅಂಡಾಕಾರದವರೆಗಿನ ಆಕಾರ ಹೊಂದಿರುತ್ತವೆ;ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಕಚ್ಚುಳ್ಳ ದುಂಡನೆಯ ಮಾದರಿಯಲ್ಲಿರುತ್ತದೆ, ಅಂಚು ನಯವಾಗಿದ್ದು ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ಕೆಳ ಬದಿ ಬೆಳ್ಳಿಯ ಹೊಳಪುಳ್ಳ ನಕ್ಷತ್ರ – ಶಲ್ಕೆಗಳಿಂದ ಕೂಡಿರುತ್ತವೆ ಹಾಗೂ ಮೇಲ್ಭಾಗ ರೋಮರಹಿತವಾಗಿರುತ್ತದೆ; ಪತ್ರದ ಬುಡದಿಂದ 1ರಿಂದ 2 ಜೋಡಿ ನಾಳಗಳು ಉದ್ಭವಿಸುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಹೆಚ್ಚೂ ಕಡಿಮೆ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 5-8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚು ಅಂತರ ಹೊಂದಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಮಧ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ .ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ
ಕಾಯಿ /ಬೀಜ : ಸಂಪುಟ ಫಲಗಳು ಬುಗುರಿ ಆಕಾರದಲ್ಲಿದ್ದು 2.5 ಸೆಂ.ಮೀ. ಉದ್ದ ಹೊಂದಿರುತ್ತವೆ ಹಾಗೂ ಕಂದು ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ಮತ್ತು 3ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1200 ಮೀ. ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಉಪ ಮೇಲ್ಚಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Bedd., Ic.t. 181. 1868-1874; Gamble, Fl.Madras 2:1314.1993 (rep.ed.); Sasidharan, Biodiversity documentation for Kerala – Flowering plants, part 6, 412.2004;Saldanha, Fl. Karnataka 2: 128.1996.

Top of the Page