ಕುಲ್ಲೀನಿಯ ಎಕ್ಸೆಲ್ಲೇರಿಟಾ Robyns - ಬೊಂಬಕೇಸಿ

Synonym : ಕುಲ್ಲೀನಿಯ ಎಕ್ಸೆಲ್ಸ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗಳನ್ನುಳ್ಳ, ಬೃಹತ್ ಹರಿದ್ವರ್ಣ ವೃಕ್ಷವಾದ ಈ ಪ್ರಭೇದ 40ಮೀ ಎತ್ತರದವರೆಗೆ ಬೆಳೆಯುತ್ತದೆ.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಶ್ವೇತ ಬಣ್ಣ ಹೊಂದಿದ್ದು ಎಳೆಯದಾಗಿದ್ದಾಗ ನಯವಾಗಿದ್ದು ಬಲಿತ ಮೇಲೆ ಚಕ್ಕೆಯುಕ್ತ ಮಾದರಿಯಲ್ಲಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ಸುವರ್ಣ ಮಿಶ್ರಿತ ಕಂದು ಬಣ್ಣದ, ಮಧ್ಯ ತೊಟ್ಟುಳ್ಳ ಶಲ್ಕಗಳಿಂದ ಆವರಿಸಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ; ತೊಟ್ಟು ದುಂಡಾಗಿದ್ದು, ಶಲ್ಕಾ ಮಾದರಿಯಲ್ಲಿದ್ದು 1.5ಸೆಂ.ಮೀ. ಉದ್ದವಿರುತ್ತದೆ; ಪತ್ರಗಳು 7.5 ರಿಂದ 16 (-25.5) ಸೆಂ.ಮೀ. ಉದ್ದ 2.7 ರಿಂದ 6.2 (-7.6) ಸೆಂ.ಮೀ. ಅಗಲವಿದ್ದು, ಇಕ್ಕಟ್ಟಾದ ಚತುರಸ್ರಾಕಾರ ಭರ್ಜಿಯಾಕಾರದಲ್ಲಿದ್ದು, ಕೊಂಚವಾದ, ಕ್ರಮೇಣ ಚೂಪಾಗುವ ತುದಿ, ದುಂಡಾದ ಮಧ್ಯದಲ್ಲಿ ಕಚ್ಚುಳ್ಳ ದುಂಡಾಕಾರವುಳ್ಳ ಬುಡ, ನಯವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ; ಪತ್ರಗಳ ಮೇಲ್ಭಾಗ ರೋಮರಹಿತ ಹಾಗೂ ನಯವಾಗಿದ್ದು ತಳಭಾಗ ಮಧ್ಯಭಾಗದಲ್ಲಿ ತೊಟ್ಟುಗಳುಳ್ಳ ಶಲ್ಕೆಗಳಿಂದ ಆವರಿಸಿರುತ್ತದೆ; ಪತ್ರದ ಮೇಲ್ಭಾಗದಲ್ಲಿ ಮಧ್ಯನಾಳಗಳ ಕಾಲುವೆಗೆರೆ ಸಮೇತವಾಗಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಹಳೆಯದಾದ ಕವಲುಗಳ ಮೇಲಿನ ಗುಚ್ಛಗಳಲ್ಲಿರುತ್ತವೆ. ಹಾಗೂ ಸುವರ್ಣ ಕಂದು ಬಣ್ಣದ ಶಲ್ಕೆಗಳಿಂದ ಕೂಡಿರುತ್ತವೆ.
ಕಾಯಿ /ಬೀಜ : ಸಂಪುಟ ಫಲ ಗೋಳಾಕಾರದಲ್ಲಿದ್ದು 12.7 ಸೆಂ.ಮೀ. ವರೆಗಿನ ವ್ಯಾಸ ಹೊಂದಿದ್ದು 5 ಕೋಶಗಳನ್ನೊಳಗೊಂಡಿರುತ್ತದೆ ಹಾಗೂ ಮುಳ್ಳಿನ ರಕ್ಷಾವರಣ ಸಮೇತವಾಗಿರುತ್ತದೆ; ಬೀಜಗಳು ಹಲವಾರು ಇದು ಕಂದು ಬಣ್ಣ ಹೊಂದಿರುತ್ತದೆ.

ಜೀವಪರಿಸ್ಥಿತಿ :

ಪಶ್ಚಿಮ ಘಟ್ಟಗಳಿಗೆ ಸೀಮಿತ – ದಕ್ಷಿಣ ಸಹ್ಯಾದ್ರಿ ಪ್ರದೇಶದ ಉದ್ದಗಲಕ್ಕೂ ಮತ್ತು ಮಧ್ಯ ಸಹ್ಯಾದ್ರಿಯ ವಯನಾಡಿನವರೆಗೂ ಈ ಪ್ರಬೇಧ ಕಂಡು ಬರುತ್ತದೆ.

ಗ್ರಂಥ ಸೂಚಿ :

Bull. Jard. Bot. Nat. Belg. 40: 249. 1970; Gamble, Fl. Madras 1: 101.1997 (re.ed); Sasidharan, Biodiversity documentation for Kerala- Flowering Plants, part 6: 56. 2004; Saldanha, Fl. Karnataka 1:240. 1996.

Top of the Page