ಎಲೆಯೋಕಾರ್ಪಸ್ ಬ್ಳಾಸ್ಕೋಯಿ Weibel - ಎಲೆಯೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ಬೂದು ಬಣ್ಣದ ಸಣ್ಣ ರೇಷ್ಮೆಯಂತಹ ರೋಮಗಳನ್ನು ಹೊಂದಿರುತ್ತವೆ ಹಾಗೂ ಎಲೆಯುದುರಿದ ಗುರುತು ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಉದುರಿ ಹೋಗುವಂತಹವು;ತೊಟ್ಟುಗಳು 1.5 – 2.5 ಸೆಂ.ಮೀ. ಉದ್ದವಿದ್ದು, ಕಾಲುವೆಗೆರೆ ಸಮೇತವಿದ್ದು ವಿರಳವಾದ ಅಪ್ಪು-ರೋಮಗಳಿಂದ ಕೂಡಿರುತ್ತವೆ;ಪತ್ರಗಳು 6 – 9.5 X 3 – 4.5 ಸೆಂ ಮೀ. ಗಾತ್ರ, ಅಂಡವೃತ್ತ ಅಥವಾ ಅಂಡವೃತ್ತ-ಅಂಡಾಕಾರ ಮಾದರಿಯ ಆಕಾರ,ಚೂಪಾದುದರಿಂದ ಹಿಡಿದು ಕಿರಿದಾದ ಹಾಗೂ ಮೊಂಡು-ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ದುಂಡಾದ ಬುಡ,ಆಳವಾದ ದಂತಗಳನ್ನು ಹೊಂದಿಲ್ಲದ ಗರಗಸ ದಂತಿತ ರೀತಿಯ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಕವಲೊಡೆದ ಜೋಡಿಗಳಿದ್ದು ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು 4-6 ಸೆಂ.ಮೀ ಉದ್ದವಿದ್ದು 6 ರಿಂದ 7 ಹೂಗಳುಳ್ಳ , ರೇಷ್ಮೆಯಂತಹ ನಯವಾದ ಹಾಗೂ ಹೊಳಪುಳ್ಳ ಮೇಲ್ಮೈ ಹೊಂದಿದ ಅಕ್ಷಾಕಂಕುಳಿನಲ್ಲಿರುವ ಮದ್ಯಾಭಿಸರ ಮಾದರಿಯವು;ಹೂಗಳು ಬಿಳಿ ಬಣ್ಣ ಹೊಂದಿದ್ದು, 1- 1.2ಸೆಂ ಮೀ.ಉದ್ದದ ತೊಟ್ಟು ಸಮೇತವಾಗಿರುತ್ತವೆ;ಪರಾಗ ಕೋಶ ದಾಡಿ ಸಮೇತವಿರುತ್ತದೆ; ಆದರೆ ಸ್ಪಂದನಾಶೀಲ ರೋಮಗಳನ್ನು ಹೊಂದಿರುವುದಿಲ್ಲ.
ಕಾಯಿ /ಬೀಜ : ಡ್ರೂಪ್ಗಳು ಚತುರಸ್ರಾಕಾರದಲ್ಲಿದ್ದು 1.5 ಸೆಂ.ಮೀ. ಉದ್ದ ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಬೆಟ್ಟ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದವನ್ನು ದಕ್ಷಿಣ ಸಹ್ಯಾದ್ರಿಯ ಪಳನಿ ಬೆಟ್ಟದ 2150 ಮೀ ಎತ್ತರದಲ್ಲಿನ ಬೇರ್ ಶೋಲ ಪ್ರದೇಶದಲ್ಲಿಂದ ದಾಖಲಿಸಲಾಗಿದೆ.

ಸ್ಥಿತಿ :

ಬಹುಶಃ ಈ ಪ್ರಭೇದ ಅಳಿದು ಹೋಗಿದೆ( ಜೀವಿಜಾತಿ ನಮೂನೆಗಳಿಂದ ಮಾತ್ರ ಪರಿಚಯ ಹೊಂದಿದೆ).

ಗ್ರಂಥ ಸೂಚಿ :

Candollea 27: 16. 1972; Mathew, Fl. Palni Hills, South India Part 1. 46. 1999.

Top of the Page