ಎಲೆಯೋಕಾರ್ಪಸ್ ರಿಕರ್ವೇಟಸ್ Corner - ಎಲೆಯೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದುಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ; ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು “ಆಬ್ರೆವಿಲ್ಲೆ “ ಮಾದರಿಯಲ್ಲಿರುತ್ತವೆ;ಕಿರುಕೊಂಬೆಗಳು ದುಂಡಾಗಿದ್ದು ಎಲೆಉದುರಿದ ಗುರುತು ಸಮೇತವಿದ್ದು. ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿರುವುದಲ್ಲದೆ ತುಕ್ಕು ವರ್ಣದ ಅಥವಾ ಬೂದು ಬಣ್ಣದ ನಕ್ಷತ್ರ-ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 2.5 ಸೆಂ.ಮೀ. ಉದ್ದವಿರುತ್ತವೆ ; ಪತ್ರಗಳು 7.5 – 10 X 5 – 7.5 ಸೆಂ. ಮೀ. ಗಾತ್ರ, ಅಂಡವೃತ್ತಾಕೃತಿಯಿಂದಿಡಿದು ಮಡಚಿದ ದೋಣಿಯನ್ನು ಹೋಲುವ ಆಕಾರ, ಚೂಪಾದುದರಿಂದ ಹಿಡಿದು ಕಿರು ಉದ್ದ ಹೊಂದಿದ ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದ ಬುಡ , ಆಳವಿಲ್ಲದ ಹಲ್ಲುಗಳನ್ನುಳ್ಳ ಹಿಂಸುರುಳಿಗೊಂಡ ಅಂಚಿನ ಸಮೇತವಿದ್ದು ,ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ; ಪತ್ರದ ತಳಭಾಗ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತದೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 9 ಜೋಡಿಗಳಿದ್ದು ಅಂಚಿನ ಕಡೆಗೆ ಕವಲೊಡೆಯುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವು;
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ 5-10 ಸೆಂ.ಮೀ.ಉದ್ದವಿದ್ದು ,ಅಂದಾಜು 10 ಹೂಗಳುಳ್ಳ ಮದ್ಯಾಭಿಸರ ಮಾದರಿಯವು;ಹೂತೊಟ್ಟುಗಳು 2 ಸೆಂ.ಮೀ. ಉದ್ದವಿದ್ದು,ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಪುಷ್ಪದಳಗಳು ಕೆನೆ ಬಣ್ಣಹೊಂದಿದ್ದು,ಆಳವಾದ ಸೀಳಿಕೆಗಳ ಸಮೇತವಿರುತ್ತವೆ.;ಪರಾಗಾಶಯ ಊಬುಗಳ ಸಹಿತವಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿದ್ದು ,ಹಸಿರು ಬಣ್ಣದವುಗಳಾಗಿದ್ದು 1.8X 1 ಸೆಂ ಮೀ. ಗಾತ್ರಹೊಂದಿದ್ದು ಮಾಂಸಲವಾಗಿರುತ್ತವೆ;ಬೀಜ ಒಂದಿದ್ದು ಚತುರಸ್ರಾಕಾರದಲ್ಲಿರುತ್ತದೆ; ಒಳಾವರಣ ಗಟ್ಟಿಯಾಗಿದ್ದು ಗುಬುಟುಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

1800 ಮತ್ತು 2400 ಮೀ.ನಡುವಿನ ಎತ್ತರದ ಬೆಟ್ಟ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಸಸ್ಯ ಆಗಾಗ್ಗೆ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Gard. Bull. Straits Settl. 10: 3199,325.1939;Gamble, Fl.Madras 1: 124.1997(rep.ed.);Sasidharan, Biodiversity documentation for Kerala- Flowering Plants,part 6, 64.2004: Saldanha, Fl. Karnataka 1:212. 1996.

Top of the Page