ಯೂಜೀನಿಯ ಫ್ಲೋಕ್ಕೋಸ Bedd. - ಮಿರ್ಟೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ನಸುಗೆಂಪು ಮಿಶ್ರಿತವಾದ ಸೂಕ್ಷ್ಮ ಮೃದುತುಪ್ಪಳದಿಂದ ದಟ್ಟವಾಗಿ ಆವೃತಗೊಂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 1.5 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತು ಎಳೆಯದಾಗಿದ್ದಾಗ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 7.2 – 10.5 X3.2 – 6 ಸೆಂ.ಮೀ.ವರೆಗಿನ ಗಾತ್ರವಿದ್ದು ವಿಶಾಲ ಅಂಡವೃತ್ತಾಕೃತಿಯ ಆಕಾರ ಹೊಂದಿದ್ದು,ಮೊಂಡಾಗ್ರವುಳ್ಳ ಕಿರಿದಾಗಿ ಕ್ರಮೇಣ ಚೂಪಾದುದರಿಂದ ಹಿಡಿದು ಚೂಪಲ್ಲದವರೆಗಿನ ತುದಿ,ಬೆಣೆ-ಒಳಬಾಗಿದ ಬುಡ,ಹಿಂಸುರುಳಿಯಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ಎಳೆಯದಾಗಿದ್ದಾಗ ತಳಬಾಗದಲ್ಲಿ ಉಣ್ಣೆಯಂತಹ ತುಪ್ಪಳದಿಂದ ಕೂಡಿದ್ದು ನಂತರ ಬಲಿತಾಗ ಬುಡದಲ್ಲಿ ಮತ್ತು ಮಧ್ಯ ನಾಳದ ಮೇಲಾದರೂ ತುಪ್ಪಳ ಕಂಡು ಬರುತ್ತದೆ, ಪತ್ರಗಳು ಪ್ರಕಾಶ ಬೇಧ್ಯ ಚುಕ್ಕೆ ರೂಪದ ರಸಗ್ರಂಥಿಗಳಿಂದ ಕೂಡಿರುತ್ತವೆ;ಮಧ್ಯ ನಾಳ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ಸುಮಾರು 12 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ; ಅಂತರ ಅಂಚಿನ ನಾಳಗಳು ಇರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ದೊಡ್ಡ ಗಾತ್ರ ಹೊಂದಿದ್ದು ಬಿಳಿ ಬಣ್ಣದವುಗಳಾಗಿದ್ದು ಒಂಟಿಯಾಗಿರುತ್ತವೆ ಅಥವಾ ಕೆಲವು ಹೂಗಳನ್ನೊಳಗೊಂಡ ಅಗ್ರದಲ್ಲಿರುವ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು ಮುಕುಟದಲ್ಲಿ ಪುಷ್ಪಪಾತ್ರೆಯ ಎಸಳುಗಳನ್ನು ಹೊಂದಿರುತ್ತವೆ ಹಾಗೂ ದಟ್ಟ ಮೃದುಪ್ಪಳದಿಂದ ಕೂಡಿರುತ್ತವೆ;ಬೀಜ ಒಂದು.

ಜೀವಪರಿಸ್ಥಿತಿ :

ಅಂದಾಜು 1300 ಮೀ.ಎತ್ತರದಲ್ಲಿನ ತೆರೆದ ನಿತ್ಯ ಹರಿದ್ವರ್ಣ ಕಾಡುಗಳ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈನ ಪೂರ್ವ ಇಳಿಜಾರು ಮತ್ತು ಪೆರಿಯಾರ್ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Bedd.,Fl.Sylv.t.200.1872;Gamble, Fl. Madras 1:483.1997(rep.ed.).

Top of the Page