ಯೂಜೀನಿಯ ರಾಟ್ಟ್ಲೆರಿಯಾನ Wt. & Arn. - ಮಿರ್ಟೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಛಾಯೆ ಹೊಂದಿರುತ್ತದೆ ಮತ್ತು ಅನಿಯತವಾದ ದೊಡ್ಡ ಗಾತ್ರದ ಚಕ್ಕೆಗಳನ್ನು ಹೊಂದಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು ಛಾಯೆಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ಮೃದುತುಪ್ಪಳದಿಂದ ಆವೃತಗೊಂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳುಅಂದಾಜು 0.3ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತುರೋಮರಹಿತವಾಗಿರುತ್ತವೆ;ಪತ್ರಗಳು 3 – 6 X 1 – 1.3 ಸೆಂ.ಮೀ.ವರೆಗಿನ ಗಾತ್ರವಿದ್ದು ಸಂಕುಚಿತ ಅಂಡವೃತ್ತದಿಂದ ಸಂಕುಚಿತ ಅಂಡ-ಭರ್ಜಿಯವರೆಗಿನ ಆಕಾರ ಹೊಂದಿದ್ದು,ಚೂಪಲ್ಲದ ಅಥವಾ ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ತುದಿ,ಒಳಬಾಗಿದ ಬುಡ,ಹಿಂಸುರುಳಿಗೊಂಡ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳನ್ನು ಹೊಂದಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಮತ್ತು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ,ಮೂರನೇ ದರ್ಜೆಯ ಮತ್ತು ಅಂತರ ಅಂಚಿನ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಮಧ್ಯಾರಂಭಿ ಪುಷ್ಪ ಮಂಜರಿಯಲ್ಲಿದ್ದು 2ರಿಂದ 3 ಹೂಗಳನ್ನೊಳಗೊಂಡ ಕಿರುಗಾತ್ರದ ಅಕ್ಷಾಕಂಕುಳಿನಲ್ಲಿರುವ,ಗುಬುಟುಗಳ ಮೇಲಿನ ವೃಂತದಲ್ಲಿರುತ್ತವೆ,ಅಪರೂಪವಾಗಿ ಒಂಟಿ ಹೂವಿರುತ್ತದೆ;ಪುಷ್ಪ ದಳ ಬಿಳಿಯಾಗಿರುತ್ತದೆ.
ಕಾಯಿ / ಬೀಜ : ಬೆರ್ರಿ ಫಲಗಳು ಮುಕುಟದಲ್ಲಿ ಪುಷ್ಪಪಾತ್ರೆಯ ಎಸಳುಗಳನ್ನು ಹೊಂದಿರುತ್ತವೆ;ಬೀಜ ಒಂದು.

ಜೀವಪರಿಸ್ಥಿತಿ :

1300 ಮೀ.ವರೆಗಿನ ಎತ್ತರದಲ್ಲಿನ ಒಣ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈನ ಪೂರ್ವ ಇಳಿಜಾರು ಮತ್ತು ಪೆರಿಯಾರ್ ಪ್ರದೇಶ ಮತ್ತು ವರುಶುನಾಡು ಬೆಟ್ಟಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Wt. & Arn., Prodr. 331. 1834; Gamble, Fl. Madras 1:484.1997(rep.ed.); Sasidharan, Biodiversity documentation for Kerala- Flowering Plants, part 6:174.2004.

Top of the Page