ಯೂಜೀನಿಯ ಸಿಂಗಂಪಟ್ಟಿಯಾನ Bedd. - ಮಿರ್ಟೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಛಾಯೆ ಹೊಂದಿರುತ್ತದೆ ಮತ್ತು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾದುದರಿಂದ ಕೊಂಚಮಟ್ಟಿಗೆ 4-ಕೋನಯುಕ್ತವಾದ ಆಕಾರ ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 0.2 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತುರೋಮರಹಿತವಾಗಿರುತ್ತವೆ;ಪತ್ರಗಳು 6 –9.5 X 3.5 – 6 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡಾಕಾರದಿಂದ ಭರ್ಜಿಯವರೆಗಿನ ಆಕಾರ ಹೊಂದಿದ್ದು,ಚೂಪಲ್ಲದ ಅಥವಾ ಸಣ್ಣದಾದ ಮತ್ತು ಮೊಂಡಾಗ್ರವುಳ್ಳ ವಿಶಾಲವಾಗಿ ಕ್ರಮೇಣ ಚೂಪಾಗುವ ತುದಿ, ಉಪ-ಹೃದಯಾಕಾರದ ಬುಡ,ನಯವಾದ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳನ್ನು ಹೊಂದಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 11 ಜೋಡಿಗಳಿದ್ದು ಅಪ್ರಮುಖವಾಗಿರುತ್ತವೆ , ಅಂಚಿನ ನಾಳಗಳು ಇರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಒಣಗಿದಾಗ ಸ್ವಲ್ಪ ಮಟ್ಟಿಗೆ ಕಾಣುವಂತಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಸಣ್ಣ ಗಾತ್ರದ,ಸಂದಣಿಗೊಂಡ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ;ಪುಷ್ಪ ದಳ ಬಿಳಿಯಾಗಿರುತ್ತದೆ.
ಕಾಯಿ / ಬೀಜ : ಬೆರ್ರಿ ಫಲಗಳು ಮುಕುಟದಲ್ಲಿ ಪುಷ್ಪಪಾತ್ರೆಯನ್ನು ಹೊಂದಿರುತ್ತವೆ; ಬೀಜ ಒಂದು.

ಜೀವಪರಿಸ್ಥಿತಿ :

300 ರಿಂದ 700 ಮೀ. ನಡುವಿನ ಎತ್ತರದಲ್ಲಿನ ಒಣ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈನ ಪೂರ್ವ ಇಳಿಜಾರು ಪ್ರದೇಶದಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Wt.,Ic.t. 273.1868-1874; Gamble, Fl. Madras 1:485.1997(rep.ed.); Sasidharan, Biodiversity documentation for Kerala - Flowering Plants, part 6:174.2004.

Top of the Page