ಇಯೋನಿಮ ಡೈಕಾಟಮಸ್ Heyne ex Roxb. - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಸೂಕ್ಷ್ಮವಾಗಿ ಸೀಳಿದ ಮಾದರಿಯಲ್ಲಿದ್ದು ಕಚ್ಚುಮಾಡಿದ ಜಾಗದಲ್ಲಿ ಬಿಳಿಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರವಾಗಿದ್ದು ರೋಮರಹಿತ -ವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾವ್ಯವಸ್ಥೆಯಲ್ಲಿರುತ್ತವೆ;ಎಲೆತೊಟ್ಟುಗಳ ಉದ್ದ0.5 ರಿಂದ 0.9 .ಸೆಂ ಮೀ; ಪತ್ರಗಳು 3- 7 X 1.4 -3 ಸೆಂ.ಮೀ ಗಾತ್ರವಿದ್ದು, ಸಂಕುಚಿತ –ಅಂಡವೃತ್ತ, ಅಂಡವೃತ್ತ,ಚತುರಸ್ರಾಕಾರ –ಭರ್ಜಿಯಾಕಾರದ ವೈವಿಧ್ಯತೆಯಲ್ಲಿರುತ್ತವೆ, ಪತ್ರದ ತುದಿ ಚೂಪಲ್ಲದ ಅಗ್ರವನ್ನು ಹೊಂದಿದ ಕ್ರಮೇಣ ಚೂಪಾಗುತ್ತಾ ಹೋಗುವ ಮಾದರಿಯಲ್ಲಿದ್ದು ಚೂಪಾದ ಬುಡವನ್ನು ಹೊಂದಿರುತ್ತವೆ, ಪತ್ರದ ಅಂಚು ನಯವಾಗಿ ಅಥವಾ ತುದಿ ಭಾಗದ ಹತ್ತಿರ ಸೂಕ್ಷ್ಮವಾದ ಗರಗಸ ದಂತಗಳನ್ನು ಹೊಂದಿರುತ್ತದೆ ಎಲೆ ಪತ್ರಗಳು ಕಾಗದವನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತೆಳುವಾಗಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ಮತ್ತು ಉನ್ನತ ವರ್ಗದ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು 7 ಕ್ಕಿಂತ ಹೆಚ್ಚು ಇದ್ದು ಹರಡುವ ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಮಾದರಿಯಲ್ಲಿರುತ್ತದೆ; ಹೂಗಳು ಕೆಂಪು ಬಣ್ಣದವು.
ಕಾಯಿ /ಬೀಜ : ಸಂಪುಟ ಫಲಗಳು ತಲೆಕೆಳಗಾದ ಹೃದಯಾಕಾರದಲ್ಲಿದ್ದು ಪ್ರತಿ ಕೋಶದಲ್ಲಿ ಒಂದರಿಂದ ಎರಡು ಬೀಜಗಳನ್ನು ಹೊಂದಿರುತ್ತವೆ .

ಜೀವಪರಿಸ್ಥಿತಿ :

ಸಾಮಾನ್ಯವಾಗಿ 700 ರಿಂದ 1400 ಮೀ ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ- ದಕ್ಷಿಣ ಸಹ್ಯಾದ್ರಿ.

ಗ್ರಂಥ ಸೂಚಿ :

Roxburgh, Fl.Ind. 2:410.1824; Gamble, Fl. Madras 1:203. 1997(re. ed..); Sasidharan, Biodiversity documentation for Kerala- Flowering Plants, part 6:96.2004;Saldanha, Fl. Karnataka2:95. 1996

Top of the Page