ಫೈಕಸ್ ಬೆಡ್ಡೋಮಿಯೈ King - ಮೊರೇಸಿ

:

Vernacular names : Tamil: ಚೇಲ;ತವಿಟ್ಟಾಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗಿನ ದೊಡ್ಡ ಗಾತ್ರದ ಮರಗಳಾದ ಈ ಪ್ರಭೇದ ಪ್ರಾರಂಭದಲ್ಲಿ ಅಪ್ಪು ಸಸ್ಯವಾಗಿದ್ದು ನಂತರ ಆಶ್ರಯದ ಸಸ್ಯವನ್ನು ಅದುಮಿ ಬೆಳೆದು ನಂತರ ಸ್ವತಂತ್ರವಾಗುತ್ತದೆ.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಿಂದ ಹಳದಿ ಛಾಯೆಯಳ್ಳ ಬಣ್ಣದಲ್ಲಿದ್ದು ನಯವಾಗಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಧೃಢ ಹಾಗೂ ದುಂಡಾಗಿದ್ದು ರೋಮರಹಿತವಾಗಿರುತ್ತವೆ ಮತ್ತು ವಲಯಾಕಾರದ ಗುರುತುಗಳಿಂದ ಕೂಡಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು 3.5 ಸೆಂ.ಮೀ.ವರೆಗಿನ ಉದ್ದವಿದ್ದು ಭರ್ಜಿಯ ಆಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ; ತೊಟ್ಟುಗಳು ಧೃಢವಾಗಿರುತ್ತವೆ ಮತ್ತು 2.5 -4 (10) ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆ ಗೆರೆ ಸಮೇತವಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 10 - 25 X 5 – 15 ಸೆಂ.ಮೀ. ಗಾತ್ರವಿದ್ದು ಅಂಡಾಕಾರವಾಗಿದ್ದು, ಕ್ರಮೇಣ ಚೂಪಾಗುವ ತುದಿ, ದುಂಡಾದುದರಿಂದ ಛಿನ್ನಾಗ್ರಗೊಂಡ ಬುಡ,ತರಂಗಿತವಾದ ಅಂಚು ,ಪತ್ರಗಳು ಮಂದವಾದ ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು ಒಣಗಿದಾಗ ಕಂದು ಬಣ್ಣ ಹೊಂದಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ರಿಂದ 15 ಜೋಡಿಗಳಿದ್ದು ಪತ್ರದ ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ರುವ ಸೈಕೋನಿಯ ರೀತಿಯವುಗಳಾಗಿದ್ದುಅಕ್ಷಾಕಂಕುಳಿನಲ್ಲಿ ಜೋಡಿಯಾಗಿರುತ್ತವೆ ಮತ್ತು ಅಂಡ ಅಥವಾ ಬುಗುರಿಯ ಆಕಾರದಲ್ಲಿದ್ದು ರೋಮರಹಿತವಾಗಿರುತ್ತವೆ;, ಪುಷ್ಪವೃಂತ 1.5 – 2 ಸೆಂಮೀ. ಉದ್ದವಿರುತ್ತದೆ; ಹೂಗಳು ಹೂಗಳು ಏಕ ಲಿಂಗಿಗಳಾಗಿದ್ದು ಸೈಕೋನಿಯಾದ ಒಳಪ್ರಾಕಾರದಲ್ಲಿರುತ್ತವೆ.
ಕಾಯಿ / ಬೀಜ : ಗಂಡು ಮತ್ತು ಹೆಣ್ಣು ಸೈಕೋನಿಯ (ಸಂಯುಕ್ತ ಫಲ)ಒಂದೇ ಸಸ್ಯದಲ್ಲಿರುತ್ತವೆ ಹಾಗೂ 2.5 ಸೆಂ.ಮೀವರೆಗಿನ ದಲ್ಲಿರುತ್ತವೆ ಹಾಗೂ 2.5 ಸೆಂ.ಮೀವರೆಗಿನ ಅಡ್ಡಗಲತೆಯನ್ನು ಹೊಂದಿದ್ದು ಕಳೆತಾಗ ಹಳದಿ ಚುಕ್ಕೆಗಳನ್ನೊಳಗೊಂಡ ಹಸಿರು ಬಣ್ಣದಲ್ಲಿರುತ್ತವೆ;ಅಖೀನುಗಳು ಬುಗುರಿ ಆಕಾರದಲ್ಲಿದ್ದು ನಯವಾಗಿರುತ್ತವೆ.

ಜೀವಪರಿಸ್ಥಿತಿ :

200 ರಿಂದ 1200 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇಧ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Ann. Roy. Bot. Gard. (Calcutta) 1:26.tt. 24 & 81 M. 1887;Gamble, Fl. Madras 3:1364. 1998(rep.ed.); Sasidharan, Biodiversity documentation for Kerala- Flowering Plants, part 6:438.2004.

Top of the Page