ಗಾರ್ಸೀನಿಯ ಟ್ರವಂಕೊರಿಕ Bedd. - ಕ್ಲೂಸಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಅತೀಕ್ಷ್ಣವಾದ 4 ಕೋನಗಳನ್ನು ಹೊಂದಿರುತ್ತವೆ ಹಾಗೂ ರೋಮರಹಿತ ವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹಳದಿ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿ-ರುತ್ತವೆ; ಎಲೆತೊಟ್ಟುಗಳು ರೋಮರಹಿತವಾಗಿದ್ದು 1 ರಿಂದ 1.8 ಸೆಂ.ಮೀ ಉದ್ದಹೊಂದಿದ್ದು,ಕಾಲುವೆಗೆರೆ ಸಮೇತವಾಗಿರುತ್ತವೆ ಹಾಗೂ ಬುಡಭಾಗದಲ್ಲಿ ಒರೆಯನ್ನು ಹೊಂದಿರುತ್ತವೆ;ಎಲೆಪತ್ರಗಳು 5 -11 X1. 3 –2.5 ಸೆಂ.ಮೀ ಗಾತ್ರ, ಸಂಕುಚಿತ ಚತುರಸ್ರದ ಆಕಾರ, ಚೂಪಲ್ಲದ ತುದಿ, ಚೂಪಾದ ಬುಡ, ಹಿಂಸುರುಳಿಯಾದ ಅಂಚು ಹೊಂದಿದ್ದು ರೋಮರಹಿತವಾಗಿದ್ದು, ತೊಗಲನ್ನು ಹೋಲುವ ಮಾದರಿಯ-ಲ್ಲಿರುತ್ತವೆ; ಎರಡನೇ ದರ್ಜೆಯ ನಾಳಗಳು ಹೆಚ್ಚೂ ಕಡಿಮೆ ಮಧ್ಯನಾಳಕ್ಕೆ ಲಂಬವಾಗಿ-ರುತ್ತವೆ ಮತ್ತು ಸಮಾಂತರದಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ಸೂಕ್ಷ್ಮವಾದ ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ ಮತ್ತು ಅತಿ ಬಲಿತ ಎಲೆಗಳ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳ- ಲ್ಲಿರುತ್ತವೆ;ಗಂಡು ಹೂಗಳು ತುದಿಯಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಒಂದು ಅಥವಾ ಎರಡರ ಸಂಖ್ಯೆಯಲ್ಲಿ ಮೇಲಿನ ಅಕ್ಷಾಕಂಕುಳಿನಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು ಚತುರಸ್ರದಿಂದ ಉಪಗೋಳಾಕಾರದಲ್ಲಿದ್ದು ಶಾಶ್ವತವಾದ ಶಲಾಕೆ ಮತ್ತು ವಿಶಾಲವಾದ ಶಲಾಕಾಗ್ರ ಹೊಂದಿದ್ದು ಸಾಮಾನ್ಯವಾಗಿ ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1000 ಮತ್ತು 1400 ಮೀ ನಡುವಿನ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ಕಂಡುಬರುವ ಈ ಸಸ್ಯ ಸಾಮಾನ್ಯವಾಗಿ ಬಹಿರಂಗವಾಗಿ ಕಾಣುವ, ಕುಂಠಿತ ಬೆಳೆವಣಿಗೆಯುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತ ಈ ಪ್ರಭೇದ ಅಗಸ್ತ್ಯಮಲೈ ಬೆಟ್ಟಗಳಲ್ಲಿ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN2000)

ಗ್ರಂಥ ಸೂಚಿ :

Beddome, Fl. Sylv. 173. 1872; Gamble, Fl. Madras 1: 74. 1997 (re. ed); Sasidharan, Biodiversity documentation for Kerala- Flowering Plants, part 6: 42. 2004.

Top of the Page