ಗ್ಳೈಕಾಸ್ಮಿಸ್ ಮ್ಯಾಕ್ರೋಕಾರ್ಪ Wt. - ರೂಟೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳಿಂದ 8 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪದುಂಡಾದ ಆಕಾರ ಹೊಂದಿದ್ದು ತುಕ್ಕಿನ ಬಣ್ಣದಲ್ಲಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು,ಅಸಮಗರಿ ರೂಪಿಗಳಾಗಿದ್ದು,ಪ್ರಯಾಯ ಹಾಗೂ ಸುತ್ತು ಜೋಡನಾ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ;ಅಕ್ಷದಿಂಡು ದುಂಡಾಗಿದ್ದು,ಉಬ್ಬಿದ ಬುಡ ಸಮೇತವಿದ್ದು ತುಕ್ಕಿನ ಬಣ್ಣದ ರೋಮಗಳಿಂದ ಕೂಡಿರುತ್ತದೆ;ಉಪತೊಟ್ಟುಗಳು 0.3 ರಿಂದ 0.6 ಸೆಂ.ಮೀವರೆಗಿನ ಉದ್ದ ಹೊಂದಿದ್ದು ಕಾಲುವೆ ಗೆರೆ ಸಮೇತವಿದ್ದು ಸ್ವಲ್ಪಮಟ್ಟಿಗೆ ದಟ್ಟ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ; ಕಿರುಪತ್ರಗಳು 3 ರಿಂದ 7 ಇದ್ದು,ಪರ್ಯಾಯವಾಗಿ ಜೋಡಿತವಾಗಿದ್ದು 7-14 X 2.5 - 4.5 ಸೆಂ.ಮೀ ಗಾತ್ರ,ಅಂಡವೃತ್ತದಿಂದ ಅಂಡವೃತ್ತ-ಚತುರಸ್ರದವರೆಗಿನ ಆಕಾರ, ಬಾಲ ರೂಪಿ ಅಥವಾ ಕ್ರಮೇಣ ಚೂಪಾಗುವ ತುದಿ,ಚೂಪಾದ ಅಥವಾ ಸ್ವಲ್ಪಮಟ್ಟಿಗೆ ಒಳಬಾಗಿದ ಬುಡ, ನಯವಾದ ಅಂಚು,ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿದ್ದು ಎಳೆಯದಾಗಿದ್ದಾಗ ತುಕ್ಕಿನ ಬಣ್ಣದ ರೋಮಗಳಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು 8-12 ಜೋಡಿಗಳಿದ್ದು ,ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಿಂದ ಹಿಡಿದು ಅಸ್ಪಷ್ಟವಾಗಿರುವರೆಗಿನ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು, ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಹೂಗಳು ಸಣ್ಣ ಗಾತ್ರದವುಗಳಾಗಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು ಅಗ್ರದಲ್ಲಿ ಸಣ್ಣದಾದ ಮೊನಚು ಮುಳ್ಳಿನ ಸಮೇತವಿರುತ್ತವೆ, 2 ಸೆಂ.ಮೀ. ವರೆಗಿನ ಗಾತ್ರ ಹೊಂದಿರುತ್ತವೆ;ಬೀಜಗಳ ಸಂಖ್ಯೆ 2-3.

ಜೀವಪರಿಸ್ಥಿತಿ :

200 ಮತ್ತು 1100 ಮೀ. ನಡುವಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಸಹ್ಯಾದ್ರಿ ಮಧ್ಯ ಸಹ್ಯಾದ್ರಿ (ವಯನಾಡು ಮತ್ತು ಕೊಡಗು ಪ್ರದೇಶಗಳು).

ಸ್ಥಿತಿ :

ಅಪರೂಪ(Nayar,1997).

ಗ್ರಂಥ ಸೂಚಿ :

Wight, Illustr. 1: 109. 1840; Sasidharan, Biodiversity documentation for Kerala- Flowering Plants, part 6: 81. 2004.

Top of the Page