ಗ್ಳೈಕಾಸ್ಮಿಸ್ ಪೆಂಟಾಫಿಲ್ಲ (Retz.) DC - ರೂಟೇಸಿ

:

Vernacular names : Tamil: ಕುರುಂಪನ್ನಲ್,ಪನಲ್,ಪಂಚಿMalayalam: ಗರೋಡ ಗಿದ,ಗುರುವಾಡೆ,ಜಂಗಮ,ಮಾಣಿಕ್ಯ ಬೀಜ,ವಾಡೆ ಮಡಿಗೆ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳಿಂದ 4 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪದುಂಡಾದ ಆಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು,ಅಸಮಗರಿ ರೂಪಿಗಳಾಗಿದ್ದು(ಅಪರೂಪವಾಗಿ ಏಕಪರ್ಣಿಕೆಗಳಾಗಿರುತ್ತವೆ), ಪರ್ಯಾಯ ಹಾಗೂ ಸುತ್ತು ಜೋಡನಾ ಮಾದರಿಯಲ್ಲಿ ಜೋಡನೆಗೊಂಡಿರುತ್ತವೆ; ಅಕ್ಷದಿಂಡು ದುಂಡಾಗಿದ್ದು,ಉಬ್ಬಿದ ಬುಡ ಸಮೇತವಿರುತ್ತದೆ ಹಾಗೂ ರೋಮರಹಿತವಾಗಿರುತ್ತದೆ;ಉಪತೊಟ್ಟುಗಳು 0.2 ಸೆಂ.ಮೀ.ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತ -ವಾಗಿರುತ್ತವೆ ; ಕಿರುಪತ್ರಗಳು3 ರಿಂದ 5 ಇದ್ದು ಪರ್ಯಾಯವಾಗಿ ಜೋಡಿತಗೊಂಡಿರುತ್ತವೆ, 9 -16.5 X 3.5 - 5 ಸೆಂ.ಮೀ ಗಾತ್ರ,ಚತುರಸ್ರ ಅಥವಾ ಅಂಡವೃತ್ತದ ಆಕಾರ, ಮೊಂಡಾಗ್ರವುಳ್ಳ ಕಿರಿದಾದ ಕ್ರಮೇಣ ಚೂಪಾಗುವ ಮಾದರಿಯ ಅಥವಾ ಚೂಪಲ್ಲದುದರಿಂದ ಅಥವಾ ಚೂಪಾದ ಮಾದರಿಯ ತುದಿ,ಚೂಪಾದ ಬುಡ, ಸೂಕ್ಷ್ಮ ದುಂಡೇಣುಗಳನ್ನೊಳಗೊಂಡ ಅಂಚು,ಮಚ್ಚೆ ರೀತಿಯ ರಸಗ್ರಂಥಿಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 7-13 ಜೋಡಿಗಳಿದ್ದು ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಗಳ ಅಕ್ಷದ ಕಡೆಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಹೂಗಳು ಬಿಳಿ ಬಣ್ಣ ಹೊಂದಿದ್ದು ಸಣ್ಣ ಗಾತ್ರದವುಗಳಾಗಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು ಅಗ್ರದಲ್ಲಿ ಸಣ್ಣ ಮೊನಚು ಮುಳ್ಳಿನ ಸಮೇತವಿರುತ್ತವೆ, 2 ಸೆಂ.ಮೀ. ವರೆಗಿನ ಗಾತ್ರ ಹೊಂದಿರುತ್ತವೆ;ಬೀಜಗಳ ಸಂಖ್ಯೆ 2 ರಿಂದ 3.

ಜೀವಪರಿಸ್ಥಿತಿ :

1400 ಮೀ. ಎತ್ತರದವರೆಗಿನ ಪ್ರದೇಶಗಳ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

DC., prodr. 1: 538. 1824, quoad basionym; Gamble, Fl. Madras 1: 153. 1997 (re. ed); Sasidharan, Biodiversity documentation for Kerala- Flowering Plants, part 6: 81. 2004; Cooke, Fl. Bombay 1: 181.1903; Almeida, Fl. Maharashtra 1:207. 1996; Saldanha, Fl. Karnataka 2: 219. 1996.

Top of the Page