ಗಾಂಫಿಯ ಸೆರ್ರೇಟ (Gaertn.) Kanis - ಆಕ್ನೇಸಿ

ಪರ್ಯಾಯ ನಾಮ : ಮೀಸಿಯ ಸೆರ್ರೇಟ Gaertn.;ಔರಾಷಿಯ ಅಂಗುಸ್ಟಿಫೋಲಿಯ Gilg.; ಗಾಂಫಿಯ ಅಂಗುಸ್ಟಿಫೋಲಿಯ Vahl.

Vernacular names : Tamil: ಚವಕಂಪು,ಚವೆಟ್ಟಿMalayalam: ಕೆಂಪು ಕುಂತಲ,ಪುಂಡೆ ಗಿಡ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಗಾತ್ರದ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು, ಪೊರೆ ರೂಪ ಹೊಂದಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆ ಕಿರುಕೊಂಬೆಗಳು ದುಂಡಾಗಿದ್ದು,ಬೂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಉದುರಿಹೋಗಿ ಗುರುತುಗಳನ್ನು ಉಳಿಸುವಂತಹವು;ತೊಟ್ಟುಗಳು0.2-0.6 ಸೆಂ.ಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 5-15 ´ 1.5-4.5 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತದಿಂದ ಅಂಡವೃತ್ತ- ಚತರಸ್ರದವರೆಗಿನ ಆಕಾರ,ಮೊಂಡಾಗ್ರವುಳ್ಳ ಚೂಪಾದುದರಿಂದ ಕ್ರಮೇಣ ಚೂಪಾಗುವ ಮಾದರಿಯ ತುದಿ,ಚೂಪಾದುದರಿಂದ ಒಳಬಾಗಿದ ಮಾದರಿವರೆಗಿನ ಬುಡ,ಗರಗಸ ದಂತಿತ ಅಂಚು,ಹೊಳಪುಳ್ಳ ಮೇಲ್ಭಾಗ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜೋಡಿ ಅಂತರ ನಾಳಗಳ ಜೊತೆ ಅಡ್ಡ ಸೇರುತ್ತವೆ;ಮೂರನೇ ದರ್ಜೆಯ ನಾಳಗಳು ಕಡಿಮೆ ಅಂತರವುಳ್ಳ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಮತ್ತು ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಮಾದರಿಯವು;ಹೂಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ;ಹೂ ತೊಟ್ಟುಗಳು 1ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಮಾಂಸಲವಾಗಿರುತ್ತವೆ, 5 ಅಥವಾ ಕಡಿಮೆ ಸಂಖ್ಯೆಯ ಡ್ರೂಪ್ಗಳು ವಿಕಸಿತಗೊಂಡ ಪೀಠದ ಮೇಲಿರುತ್ತವೆ ಮತ್ತು ಕೆನ್ನೀಲಿ ಬಣ್ಣದವುಗಳಾಗಿರುತ್ತವೆ;ಪ್ರತಿ ಡ್ರೂಪ್ ನಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಮತ್ತು ತೆರೆದ ಪ್ರದೇಶಗಳಲ್ಲಿ ಈ ಮರಗಳು ಕಂಡುಬರುತ್ತವೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದಲ್ಲಿ ದಕ್ಷಿಣ,ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಆಗಾಗ್ಗೆ ಕಂಡುಬರುತ್ತದೆ.

ಗ್ರಂಥ ಸೂಚಿ :

Taxon 16: 422. 1967; Gamble, Fl. Madras 1: 167.1997 (re.ed); Sasidharan, Biodiversity documentation for Kerala- Flowering Plants, part 6: 85. 2004; Saldanha, Fl. Karnataka 1: 187. 1996.

Top of the Page