ಗೋನಿಯೋತಲಾಮಸ್ ವೈಟಿಯೈ J. Hk. & Thoms. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ರಿಂದ 7ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ರೋಮರಹಿತವಾಗಿದ್ದು, ಎಳೆಯ ಕವಲುಗಳು ಸೂಕ್ಷ್ಮವಾದ ಮೃದುತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ. ತೊಟ್ಟುಗಳು 0.6 ರಿಂದ 1 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಹಿತವಾಗಿದ್ದು ರೋಮರಹಿತವಾಗಿರುತ್ತವೆ; ಎಲೆ ಪತ್ರ 8 - 22 × 4 - 4.5 ಸೆಂ.ಮೀ. ಇದ್ದು ರೇಖಾತ್ಮಕ-ಭರ್ಜಿಯಾಕಾರದಲ್ಲಿರುತ್ತದೆ, ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡ ಬೆಣೆಯಾಕಾರದಲ್ಲಿರುತ್ತದೆ. ಎಲೆ ಪತ್ರರೋಮರಹಿತ, ಮೇಲ್ಮೈ ಕಾಗದದ ಮಾದರಿಯಲ್ಲಿದ್ದು ಸಾಮಾನ್ಯವಾಗಿ ತಳಭಾಗದಲ್ಲಿ ಕಪ್ಪು ಚುಕ್ಕೆಗಳಿಂದ ಕೂಡಿರುತ್ತದೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 13 ರಿಂದ 25 ಜೋಡಿಗಳಿದ್ದು ತೆಳುವಾಗಿದ್ದು ಪತ್ರ ಅಂಚಿನಲ್ಲಿ ಕುಣಿಕೆಗೊಳ್ಳುತ್ತವೆ. ತೃತೀಯ ದರ್ಜೆಯ ನಾಳಗಳು ಸ್ಥೂಲವಾದ ಜಾಲಬಂಧನಾಳ ವಿನ್ಯಾಸದಲ್ಲಿದ್ದು, ಪ್ರಮುಖವಾಗಿ ಗೋಚರಿಸುವುದಿಲ್ಲ.
ಪುಷ್ಪಮಂಜರಿ/ಹೂಗಳು : ಹೂಗಳು ಹಳದಿ ಛಾಯೆಯುಳ್ಳ ಕೆನ್ನೀಲಿ ಬಣ್ಣ ಹೊಂದಿದ್ದು, ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ. ಹೂ ತೊಟ್ಟುಗಳು 7 - 12ಮಿ.ಮೀ. ಉದ್ದವಿದ್ದು ಮೃದು ತುಪ್ಪಳದಿಂದ ಕೂಡಿರುತ್ತವೆ.
ಕಾಯಿ /ಬೀಜ : ಬಹುಮಟ್ಟಿಗೆ ತೊಟ್ಟುರಹಿತವಾದ ಒಂದು ಬೀಜವುಳ್ಳ ಬೆರ್ರಿಗಳು ಬುಗುರಿಯಾಕಾರದಲ್ಲಿದ್ದು, ತುದಿಯಲ್ಲಿ ಸೂಕ್ಷ್ಮ ಮೊನಚನ್ನು ಹೊಂದಿದ್ದು ಸಾಮೂಹಿಕವಾಗಿರುತ್ತವೆ, ಬೆರ್ರಿಗಳು 1.5 ರಿಂದ 2.5 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿದ್ದು, ಹಣ್ಣಾದಾಗ ಹಳದಿ ಬಣ್ಣದ್ದಾಗಿರುತ್ತದೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟಕ್ಕಿಂತ 600 ರಿಂದ 1500ಮೀ ಮಧ್ಯಮ ಎತ್ತರದ ನಿತ್ಯ ಹರಿದ್ವರ್ಣ ಕಾಡು ಕೆಳಛಾವಣಿ ಮರಗಳಾಗಿ ಈ ಪ್ರಭೇದ ಕಾಣಸಿಗುತ್ತವೆ.

ವ್ಯಾಪನೆ :

ಪಶ್ಚಿಮಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಬೆಳೆಯುತ್ತವೆ.

ಗ್ರಂಥ ಸೂಚಿ :

Hooker and Thomson, Fl. Ind. 106. 1855; Gamble, Fl. Madras 1: 18.1997 (re.ed); Mohanan and Sivadasan, Fl. Agasthymala 56. 2002; Sasidharan, Biodiversity documentation for Kerala- Flowering Plants, part 6: 17. 2004.

Top of the Page