ಹಂಬೋಲ್ಟ್ ಶಿಯ ವಾಹ್ಲಿಯಾನ Wt. - ಸಿಸಾಲ್ಪಿನಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಕೊರಟಿ, ನೀರ್ವಾಂಜೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕಡು ಕಂದು ಬಣ್ಣ ಹೊಂದಿದ್ದು ಆಳವಿಲ್ಲದ ಸೀಳಿಕಾ ಮಾದರಿಯಲ್ಲಿದ್ದು, ಕಚ್ಚು ಮಾಡಿದ ಜಾಗ ನಸು- ಕಂದು ಬಣ್ಣದಲ್ಲಿರುತ್ತದೆ
ಎಲೆಗಳು : ಎಲೆಗಳು ಸಮಸಂಖ್ಯಾ ಗರಿರೂಪಿ ಸಂಯುಕ್ತ ಮಾದರಿಯಲ್ಲಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಕಾವಿನೆಲೆಗಳು ಜೋಡಿಗಳಾಗಿದ್ದು, ಎಲೆಯನ್ನು ಹೋಲುವಂತಿದ್ದು 4 x 1.5 ಸೆ.ಮೀ. ಗಾತ್ರದಲ್ಲಿದ್ದು, ಇಕ್ಕಟ್ಟಾದ ಅಂಡಾಕಾರ ಹೊಂದಿದ್ದು ಕ್ರಮೇಣ ಚೂಪಾಗುವ ತುದಿಯನ್ನು ಹೊಂದಿರುತ್ತವೆ, ಬುಡದಲ್ಲಿ ವಿಶಾಲವಾದ ಮೂತ್ರಕೋಶ ಮಾದರಿಯ ಉಪಾಂಗ ಇರುತ್ತದೆ; ಅಕ್ಷದಿಂಡು ಉಬ್ಬಿದ ಬುಡಸಮೇತವಿರುತ್ತದೆ ಹಾಗೂ 5 ರಿಂದ 13.5 ಉದ್ದ ಹೊಂದಿರುತ್ತದೆ. ತುಸುವಾದ ರೆಕ್ಕೆ ಪಡೆದಿರುವುದನ್ನು ಬಿಟ್ಟರೆ ಆಕಾರದಲ್ಲಿ ದುಂಡಾಗಿರುತ್ತದೆ; ಕಿರು ಎಲೆಗಳ ತೊಟ್ಟು 0.5 ರಿಂದ 0.8 ಸೆ.ಮೀ. ಉದ್ದ ಹೊಂದಿರುತ್ತದೆ; ಕಿರು ಎಲೆಗಳು 3 ಜೋಡಿಗಳಿದ್ದು ಅಭಿಮುಖಿ ಅಥವಾ ಉಪ-ಅಭಿಮುಖಿಗಳಾಗಿರುತ್ತವೆ, ಸಾಮಾನ್ಯವಾಗಿ ಕೆಳಗಿನ ಜೋಡಿ ಮೇಲಿನ ಜೋಡಿಗಿಂತ ಕೊಂಚ ಸಣ್ಣಗಾತ್ರವನ್ನು ಹೊಂದಿರುತ್ತದೆ, ಪತ್ರ 9–25 x 2.5–7 ಸೆ.ಮೀ. ಗಾತ್ರದಲ್ಲಿದಲ್ಲಿದು ಇಕ್ಕಟ್ಟಾದ ಅಂಡ - ವೃತ್ತ ಅಥವಾ ಭರ್ಜಿಯಾಕಾರ ಹೊಂದಿರುತ್ತದೆ, ಕಿರು ಎಲೆಗಳ ತುದಿ ಅನುಕ್ರಮವಾಗಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡ ಚೂಪಾಗಿರುತ್ತದೆ, ಅಂಚು ನಯವಾಗಿರುತ್ತದೆ, ಕಿರು ಎಲೆಗಳು ಕಾಗದವನ್ನೋಲುವ ಅಥವಾ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 9–13 ಜೋಡಿಗಳಿದ್ದು ತುದಿಯ ಕಡೆಗೆ ಮೇಲೇರುವಂತಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಶ್ವೇತ ಬಣ್ಣದಲ್ಲಿದ್ದು, ಕಂದು ಮಿಶ್ರಿತ ಹಳದಿ ಬಣ್ಣದ ಮಖಮಲ್ಲಿನಿಂದ ಆವೃತವಾದ ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಪಾಡುಗಳು 20 ಸೆ.ಮೀ.ವರೆಗಿನ ಉದ್ದ ಹೊಂದಿದ್ದು ತೆಳು ಹಾಗೂ ಚಪ್ಪಟೆಯಾಗಿದ್ದು ಕಂದು ಮಿಶ್ರಿತ ಹಳದಿ ಬಣ್ಣದ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ ಹಾಗೂ 4 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

700 ಮೀ. ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಸುತ್ತಮುತ್ತಲಿನ ಝರಿಗಳ ಮತ್ತು ಜೌಗು ಪ್ರದೇಶದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ - ದಕ್ಷಿಣ ಸಹ್ಯಾದ್ರಿ ಹಾಗೂ ದಕ್ಷಿಣ ಮಲಬಾರಿನಲ್ಲಿ ಆಗಾಗ್ಗೆಯೂ ಮತ್ತು ಪಾಲಕ್ಕಾಡ್ – ಕೋಳಿಕೋಡ್ ಪ್ರದೇಶದಲ್ಲಿ ಅಪರೂಪವಾಗಿಯೂ ಈ ಸಸ್ಯ ಕಂಡು ಬರುತ್ತದೆ.

ಗ್ರಂಥ ಸೂಚಿ :

Wight, Ic. 1607 & 1608. 1850; Gamble, Fl. Madras 1:411. 1997 (re.ed); Sasidharan, Biodiversity documentation for Kerala - Flowering Plants, part 6:155. 2004.

Top of the Page