ಐಲೆಕ್ಸ್ ವೈಟಿಯಾನ Wall.ex Wt. - ಅಕ್ವಿಫೋಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30ಮೀ ಎತ್ತರದವರೆಗೆ ಬೆಳೆಯುವ ನಿತ್ಯ ಹರಿದ್ವರ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾದ ಮೇಲ್ಮೈ ಹಾಗೂ ಬೂದು ಬಣ್ಣ ಹೊಂದಿರುತ್ತದೆ. ಹಾಗೂ ಸೂಕ್ಷ್ಮವಾಯುವಿನಿಮಯ ರಂಧ್ರಗಳ ಸಮೇತವಿರುತ್ತವೆ. ಕಚ್ಚು ಮಾಡಿದ ಜಾಗ ಕೆನೆಯ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ರೋಮರಹಿತವಾಗಿರುತ್ತವೆ; ಕೆಲವು ಸಂದರ್ಭದಲ್ಲಿ ಕೆನ್ನೀಲಿ ಛಾಯೆಯನ್ನು ಹೋಂದಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು, ಕಾಲುವೆಗೆರೆಯುಳ್ಳ 0.7 ಸೆಂ.ಮೀ. ಉದ್ದದ ತೊಟ್ಟುಗಳನ್ನು ಹೊಂದಿರುತ್ತವೆ. ಎಲೆಪತ್ರ 3 ರಿಂದ 6.5 ಸೆಂ.ಮೀ. ಉದ್ದ, 1 ರಿಂದ 3 ಸೆಂ.ಮೀ. ಅಗಲಹೊಂದಿರುತ್ತದೆ. ಅಂಡಾವೃತ್ತ ಕೆಲವು ವೇಳೆ ಬುಗುರಿಯ ಆಕಾರ ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ, ನಯವಾದ ಅಂಚು, ರೋಮರಹಿತ ಹಾಗೂ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತದೆ. ಮಧ್ಯನಾಳ ಕಾಲುವೆಗೆರೆ ಸಮೇತವಿರುತ್ತದೆ. ಎರಡನೇ ದರ್ಜೆಯ ನಾಳಗಳು 6 ಜೋಡಿಗಳಿದ್ದು ತೃತೀಯ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳು ಒಂದೇ ಸಸ್ಯದಲ್ಲಿ ಉಭಯಲಿಂಗದ ಪುಷ್ಪಗಳು ಇರುತ್ತವೆ. ಗಂಡುಹೂಗಳು ಶ್ವೇತವರ್ಣ ಹೊಂದಿದ್ದು ಕಿರಿದಾದ ಪುಷ್ಪವೃಂತ ಹೊಂದಿದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಪುಷ್ಪವೃಂತ 0.8 ರಿಂದ 1.25ಸೆಂ.ಮೀ. ಉದ್ದವಿರುತ್ತದೆ. ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿನ ಗುಜ್ಜಾಕಾರದಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ದುಂಡಾಗಿದ್ದು, ಕೆಂಪು ವರ್ಣದಲ್ಲಿದ್ದು ತುದಿಯಲ್ಲಿ ಸಣ್ಣದಾದ ಮೊನಚು ಮುಳ್ಳು ಸಮೇತವಿರುತ್ತದೆ. ಆರು ಕೋಣೆಗಳಿದ್ದು ಪ್ರತಿಯೊಂದರಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

1800 ರಿಂದ 2400ಮೀ ಎತ್ತರ ಪ್ರದೇಶದಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಬೇಧ ಕಂಡುಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಪ್ರದೇಶ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ನೀಲಗಿರೀಸ್, ಅನೈಮಲೈ ಮತ್ತು ಪಳನಿ ಗಿರಿಶ್ರೇಣಿಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ಗ್ರಂಥ ಸೂಚಿ :

Wight, Ic. Pl. Ind. Orient. t. 1216. 1848; Gamble, Fl. Madras 1: 200.1997 (re.ed); Sasidharan, Biodiversity documentation for Kerala- Flowering Plants, part 6: 95. 2004

Top of the Page