ಇಕ್ಸೋರ ಮಲಬಾರಿಕ (Denst.) Mabb. - ರೂಬಿಯೇಸಿ

ಪರ್ಯಾಯ ನಾಮ : ಚಿಯೋಕೊಕ್ಕ ಮಲಬಾರಿಕ Densst ; ಇಕ್ಸೋರ ಲ್ಯಾನ್ಸಿಯೋಲೇರಿಯ Colebr.

Vernacular names : Tamil: ಚೆರುಕುರವು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ದಬ್ಬಳದಾಕಾರದ ಅಗ್ರವುಳ್ಳ ವಿಶಾಲವಾದ ಅಂಡ ಆಕಾರ ಹೊಂದಿದ್ದು ತೊಟ್ಟುಗಳ ನಡುವೆ ಇದ್ದು ಶಾಶ್ವತವಾಗಿ ಉಳಿಯುತ್ತವೆ;ತೊಟ್ಟು 0.2 ರಿಂದ 0.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ, ರೋಮರಹಿತವಾಗಿರುತ್ತದೆ;ಪತ್ರಗಳು 7-16 X 2.5 –3.5 ಸೆಂ.ಮೀ. ಗಾತ್ರ ಹೊಂದಿದ್ದು ಭರ್ಜಿಯಿಂದ ರೇಖಾತ್ಮಕ-ಭರ್ಜಿವರೆಗಿನ ಆಕಾರ ಹೊಂದಿದ್ದು, ಸಂಕುಚಿತ ಕ್ರಮೇಣ ಚೂಪಾಗುವ ತುದಿ, ಚೂಪಲ್ಲದುದರಿಂದ ಚೂಪಾಗುವ ಮಾದರಿವರೆಗಿನ ಬುಡ, ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 12 ರಿಂದ 22 ಜೋಡಿಗಳಿರುತ್ತವೆ ಹೆಚ್ಚೂ ಕಡಿಮೆ ಮಧ್ಯನಾಳಕ್ಕೆ ಸಮಕೋನದಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ನೀಳಛತ್ರ ಮಾದರಿಯಲ್ಲಿದ್ದು ಸಡಿಲವಾಗಿ ಜೋಡಿತಗೊಂಡಿರುತ್ತವೆ ; ಹೂಗಳು ಬಿಳಿ ಬಣ್ಣ ಹೊಂದಿರುತ್ತವೆ; ತೊಟ್ಟುಗಳು 0.7 ಸೆಂ.ಮೀವರೆಗಿನ ಉದ್ದವಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಬಹುಮಟ್ಟಿಗೆ ಗೋಳದ ಆಕಾರ ಹೊಂದಿರುತ್ತವೆ; ಬೀಜಗಳ ಸಂಖ್ಯೆ 2.

ಜೀವಪರಿಸ್ಥಿತಿ :

600 ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣ ದವರೆಗಿನ ಕಾಡುಗಳ ಒಳಾವರಣದಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಉತ್ತರ ಮಲಬಾರು ಪ್ರದೇಶಗಳಲ್ಲಿ ಕಂಡುಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000).

ಗ್ರಂಥ ಸೂಚಿ :

Taxon 26: 539. 1977;Gamble, Fl. Madras 2: 630. 1993 (re. ed); Sasidharan, Biodiversity documentation for Kerala- Flowering Plants, part 6: 219. 2004; Cooke, Fl. Bombay 1: 608.1903;

Top of the Page