ಲ್ಯಾಸಿಯಾಂತಸ್ ಪಾರ್ವಿಫೋಲಿಯಸ್ Wt. - ರೂಬಿಯೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ. ಎತ್ತರದ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಕಿರುಕೊಂಬೆಗಳು ಉಪ-ದುಂಡಾಗಿರುವುದರಿಂದ ಸಂಕುಚಿತವರೆಗಿನ ಆಕಾರ ಹೊಂದಿರುತ್ತವೆ ,ಎಳೆಯದಾಗಿದ್ದಾಗ ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ,ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆ -ಯಲ್ಲಿರುತ್ತವೆ; ಕಾವಿನೆಲೆಗಳು ಸಣ್ಣ ಗಾತ್ರದಲ್ಲಿದ್ದು ತ್ರಿಕೋನದ ಆಕಾರ ಹೊಂದಿದ್ದು ತೊಟ್ಟುಗಳ ನಡುವೆ ಇರುತ್ತವೆ ಹಾಗೂ ಶಾಶ್ವತವಾಗಿರುತ್ತವೆ;ತೊಟ್ಟು 0.7 ಸೆಂ.ಮೀ. ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ, ರೋಮರಹಿತವಾಗಿರುತ್ತವೆ;ಪತ್ರಗಳು 6 X 2.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ-ಚತುರಸ್ರದಿಂದ ಬುಗುರಿಯವರೆಗಿನ ಆಕಾರ ಹೊಂದಿದ್ದು, ಅಗ್ರದಲ್ಲಿ ಮೊನಚು ಮುಳ್ಳುಳ್ಳ ಥಟ್ಟನೆ ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದ ಬುಡ, ನಯವಾದ ಅಂಚು,ಉಪತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತುಸುವಾಗಿ ಮೇಲೆದ್ದಿರುತ್ತದೆ ಅಥವಾ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 3 ರಿಂದ 4 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಎಲೆ ದಿಂಡಿಗೆ ಸಮಕೋನದಲ್ಲಿದ್ದು ಕಡಿಮೆ ಅಂತರ ಹೊಂದಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಮಧ್ಯಾರಂಭಿ ಮಾದರಿಯವುಗಳಾಗಿದ್ದು ಅಕ್ಷಾಕಂಕುಳಿನಲ್ಲಿ ಅಥವಾ ಎಲೆರಹಿತ ಕೊಂಬೆಗಳ ಮೇಲಿರುತ್ತವೆ; ಹೂಗಳು ತೊಟ್ಟು ರಹಿತವಾಗಿದ್ದು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರದಲ್ಲಿದ್ದು ಅಗ್ರದಲ್ಲಿ ಶಾಶ್ವತವಾದ ಪುಷ್ಪಪಾತ್ರೆಯ ಎಸಳುಗಳನ್ನು ಹೊಂದಿರುತ್ತವೆ,ಕಳಿತಾಗ ಕಡು ಕೆನ್ನೀಲಿ ಬಣ್ಣ ಹೊಂದಿರುತ್ತವೆ;ಬೀಜಗಳ ಸಂಖ್ಯೆ 4.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Cal. J. Nat. Hist. 6: 502. 1846; Gamble, Fl. Madras 2: 647. 1993 (re. ed); Sasidharan, Biodiversity documentation for Kerala- Flowering Plants, part 6: 221. 2004.

Top of the Page