ಲೆಪಿಸಾಂತೆಸ್ ಎರೆಕ್ಟ - ಸ್ಯಾಪಿಂಡೇಸಿ

Synonym : ತ್ರಾಲೋಕಾಕ್ಕಸ್ ಎರೆಕ್ಟಸ್ Radlk.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಬೆಂಡು ರಂಧ್ರಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ, ಬೆಂಡು ರಂಧ್ರಗಳನ್ನು ಹೊಂದಿರುತ್ತದೆ. ಎಳೆಯ -ದಾಗಿದ್ದಾಗ ಸ್ವಲ್ಪಮಟ್ಟಿಗೆ ಸೂಕ್ಷ್ಮ ಮೃದು ತುಪ್ಪಳದ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತವಾಗಿದ್ದು ಮತ್ತು ಸಮಗರಿ ರೂಪಿಗಳಾಗಿರುತ್ತವೆ,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು 50 ಸೆಂ.ಮೀ.ವರೆಗಿನ ಉದ್ದವಿರುತ್ತವೆ;ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು,ಅಸ್ಪಷ್ಡವಾದಉಬ್ಬು ಸಾಲಿನ ಗುರುತುಗಳ ಸಮೇತವಿರುತ್ತದೆ ಮತ್ತು ಎಳೆಯದಾಗಿದ್ದಾಗ ಮೃದುತುಪ್ಪಳವನ್ನು ಹೊಂದಿರುತ್ತದೆ; ಉಪತೊಟ್ಟು 0.5 ರಿಂದ 1 ಸೆಂ.ಮೀ.ಉದ್ದವಿರುತ್ತದೆ ಹಾಗೂ ಕಾಲುವೆಗೆರೆ ಸಮೇತವಿದ್ದು, ರೋಮರಹಿತವಾಗಿರುತ್ತದೆ;ಉಪಪತ್ರಗಳು 4 ರಿಂದ 6 ಜೋಡಿಗಳಿದ್ದು ಅಭಿಮುಖಿ, ಉಪ ಅಭಿಮುಖಿ ಅಥವಾ ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಗಾತ್ರದಲ್ಲಿ 12-21 X 3.5 – 6 ಸೆಂ.ಮೀ. ಇದ್ದು,ಸಂಕುಚಿತ ಅಂಡವೃತ್ತದಿಂದ ಅಂಡವೃತ್ತ-ಚತುರಸ್ರದ ಆಕಾರದಲ್ಲಿರುತ್ತವೆ,ಕಿರು ಪತ್ರಗಳ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಚೂಪಾದುದರಿಂದ ಒಳಬಾಗಿದವರೆಗಿನ ಮಾದರಿಯಲ್ಲಿರುತ್ತದೆ, ಅಂಚು ನಯವಾಗಿದ್ದು ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 8 ರಿಂದ 10 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿದ್ದು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಸಂಕೀರ್ಣಲಿಂಗಿಗಳಾಗಿದ್ದುಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು 1ರಿಂದ 3 ಇದ್ದು ಬುಡಭಾಗದಲ್ಲಿ ಆಜನ್ಮ ಸಂಯುಕ್ತವಾಗಿರುತ್ತವೆ ;ಅಂಡವೃತ್ತದ ಆಕಾರದಲ್ಲಿದ್ದು,3.5 X 2 ಸೆಂ.ಮೀ. ಗಾತ್ರ ಹೊಂದಿರುತ್ತವೆ;ಬೀಜಗಳು ಅಂಡವೃತ್ತದ ಆಕಾರದಲ್ಲಿದ್ದು,ಕಪ್ಪು ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

700 ಮತ್ತು 1400 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು,ಶ್ರೀಲಂಕಾ,ಮ್ಯಾನ್ಮಾರ್: ಪಶ್ಚಿಮ ಘಟ್ಟದಲ್ಲಿನ ಅಣ್ಣಾಮಲೈ, ಪಾಲಕ್ಕಾಡು ಮತ್ತು ವಯನಾಡಿನಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Radlk., Sitzungsber. Math.-Phys. Cl. Koenigl. Bayer. Akad. Wiss. Muenchen 8: 276. 1878; Gamble, Fl. Madras 1: 251. 1997 (re. ed); Sasidharan, Biodiversity documentation for Kerala- Flowering Plants, part 6: 108. 2004.

Top of the Page