ಲಿಟ್ಸಿಯ ಘಾಟಿಕ Sald. - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಬೂದು ವರ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಉಪ-ಸುತ್ತು ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ;ತೊಟ್ಟುಗಳು 1-2.5 ಸೆಂ.ಮೀ. ಉದ್ದವಿದ್ದು ಉಪ-ದುಂಡಾಗಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ ;ಪತ್ರಗಳು 9-34 X6-13 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಬುಗುರಿಯ ಆಕಾರ ಹೊಂದಿರುತ್ತವೆ ;ತುದಿ ಥಟ್ಟನೆ ಕ್ರಮೇಣ ಚೂಪಾದ ಮಾದರಿಯಲ್ಲಿರುತ್ತವೆ ಮತ್ತು ಬೆಣೆಯಾಕಾರದ ಬುಡವನ್ನು ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ; ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರದ ತಳಭಾಗ ತುಂಬಾ ಮೃದುವಾದ ದಟ್ಟ ಮೃದುತುಪ್ಪಳವನ್ನು ಹೊಂದಿರುತ್ತದೆ ಮತ್ತು ಪತ್ರದ ಮೇಲ್ಭಾಗದಲ್ಲಿ ಮಧ್ಯನಾಳವನ್ನು ಹೊರತು ಪಡಿಸಿದರೆ ಉಳಿದಂತೆ ರೋಮರಹಿತವಾಗಿರುತ್ತದೆ; ಪತ್ರಗಳು ಎರಡನೇ ದರ್ಜೆಯ ನಾಳಗಳು 9-14 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪೀಠಛತ್ರ ಪುಷ್ಪಮಂಜರಿಗಳುಒಂಟಿಯಾಗಿರುತ್ತವೆ ಮತ್ತು ದಟ್ಟ ಮೃದುತುಪ್ಪಳದಿಂದ ಕೂಡಿದ ಕಿರು ವೃಂತ ಪತ್ರಕಗಳ ಸಮೇತವಿರುವ 4 ರಿಂದ 5 ಹೂಗಳನ್ನೊಳಗೊಂಡಿರುತ್ತವೆ ಪುಷ್ಪಾವರಣ ಪತ್ರಕಗಳ ಮೇತವಿರುತ್ತವೆ.
ಕಾಯಿ /ಬೀಜ : ಬೆರ್ರಿ ಗೋಳಾಕಾರದಲ್ಲಿದ್ದು 1ಸೆಂ.ಮೀ. ಅಡ್ಡಗಳತೆಯನ್ನು ಹೊಂದಿರುತ್ತದೆ; ಪುಷ್ಪಾವರಣದ ನಳಿಕೆ ವೃದ್ಧಿರಹಿತವಾಗಿರುತ್ತವೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

1000 ಮೀ. ವರೆಗಿನ ಎತ್ತರದ ಪ್ರದೇಶಗಳ ಭಂಗಗೊಂಡ ನಿತ್ಯ ಹರಿದ್ವರ್ಣ ಅಥವಾ ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಅಪರೂಪವಾಗಿ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Saldanha, Fl. Karnataka 1:67.1996. Sasidharan, Biodiversity documentation for Kerala Flowering Plants, part 6: 398. 2004;

Top of the Page