ಮೀಸ ಇಂಡಿಕ (Roxb.) DC - ಮಿರ್ಸಿನೇಸಿ

ಪರ್ಯಾಯ ನಾಮ : ಬೆಯೋಬಾಟ್ರಿಸ್ ಇಂಡಿಕ Roxb.;ಮೀಸ ಡೂಬಿಯ DC.;ಮೀಸ ಪೆರ್ರೋಟೆಟಿಯಾನ A.DC.

Vernacular names : Tamil: ಕರಿ ಇತ್ತಿ;ಕಿರೀತ್ತಿ;ಕಿರಿತಿMalayalam: ಮಂಡಸೆ;ಗುಡ್ಡೆ ಹರಗಿ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 4 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದ ಛಾಯೆಯನ್ನು ಹೊಂದಿರುತ್ತದೆ..
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ದುಂಡಾಗಿದ್ದು ಬೂದು ಭಣ್ಣದ ಮೃದು ತುಪ್ಪಳದಿಂದ ಕೂಡಿರುತ್ತದೆ ಹಾಗೂ ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2 – 3 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿದ್ದು ಎಳೆಯದಾಗಿದ್ದಾಗ ಮೃದು ತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 9 – 15 X4.5 – 7.5 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತದ- ಅಂಡ ಅಥವಾ ಅಂಡ-ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣವಾಗಿ ಚೂಪಾಗುವ ತುದಿ, ಚೂಪಾದದುದರಿಂದ ಹಿಡಿದು ದುಂಡಾದ ಅಥವಾ ಸ್ವಲ್ಪ ಮಟ್ಟಿಗೆ ಒಳಬಾಗಿದ ಬುಡ,ಅಂಚು ಒರಟಾದ ಗರಗಸದಿಂದ ದಂತಿತ ರೀತಿಯಲ್ಲಿಇರುತ್ತದೆ,ಪತ್ರಗಳು ತಳಭಾಗದಲ್ಲಿ ರೋಮಶವಾಗಿರುತ್ತವೆ ;ಮಧ್ಯ ನಾಳ ಮೇಲ್ಭಾಗದಲ್ಲಿಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 ರಿಂದ 13 ಜೋಡಿಗಳಿಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯಲ್ಲಿರುತ್ತವೆ; ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು ಕಳೆತಾಗ ಬಿಳಿ ಮಿಶ್ರಿತ ನಸುಗೆಂಪು ಬಣ್ಣ ಹೊಂದಿರುತ್ತವೆ; ಬೀಜಗಳು ಅಸಂಖ್ಯವಾಗಿದ್ದು, ಕೋನಯುಕ್ತವಾಗಿರುತ್ತವೆ.

ಜೀವಪರಿಸ್ಥಿತಿ :

1800 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣದವರೆಗಿನ ಮತ್ತು ಎಲೆಯುದುರು ಕಾಡುಗಳ ಒಳಗೆ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಪಾಕಿಸ್ತಾನ; ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Trans. Linn. Soc. London 17:134.1834;Gamble, Fl. Madras 2:748.1998(rep.ed.); Sasidharan, Biodiversity documentation for Kerala- Flowering Plants, part 6:265.2004; Saldanha, Fl. Karnataka 1: 351.1984.

Top of the Page