ಮೀಲಿಯ ಡೂಬಿಯ Cav. - ಮೀಲಿಯೇಸಿ

ಪರ್ಯಾಯ ನಾಮ : ಮೀಲಿಯ ಕಂಪೋಸಿಟ Willd.

Vernacular names : Tamil: ಅಕಿಲ್; ಕನಮುಲ್ಲ; ಪುರಿಪ್ಪ; ವೆಲ್ಲಾಕಿಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಕಂದು ಬಣ್ಣದಲ್ಲಿದ್ದು ಚಕ್ಕೆಗಳು ಆಯತಾಕಾರದಲ್ಲಿದ್ದು ದೊಡ್ಡ ಗಾತ್ರದಲ್ಲಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಭಾಗಗಳು ಹಗರು–ದಟ್ಟ ಮೃದು ತುಪ್ಪಳದಿಂದ ಕೂಡಿದ್ದು ದುಂಡಾಗಿರುತ್ತದೆ, ಬಲಿತಾಗ ರೋಮ ರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸಂಯುಕ್ತ,ದ್ವಿಗರಿಯಿಂದ ತ್ರಿಗರಿ ರೂಪಿಗಳಾಗಿದ್ದು ಅಸಮ ಸಂಖ್ಯೆಯ ಗರಿಗಳನ್ನು ಹೊಂದಿರುತ್ತವೆ ಮತ್ತು ಪರ್ಯಾಯ,ಸುತ್ತು ಜೋಡನೆಯಲ್ಲಿದ್ದು 1 ಮೀ. ವರೆಗಿನ ಉದ್ದವನ್ನು ಹೊಂದಿರುತ್ತದೆ ಹಾಗೂ ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ; ನಡುಕಾಂಡ ದುಂಡಾಗಿದ್ದು 30 ಸೆಂ.ಮೀ. ವರೆಗಿನ ಉದ್ದವನ್ನು ಹೊಂದಿರುತ್ತದೆ; ಕಿರು ತೊಟ್ಟುಗಳು 0.3-1.2 ಸೆಂ.ಮೀ. ಉದ್ದವಿರುತ್ತವೆ;ಗರಿಗಳು 3 -8 ಜೋಡಿಗಳಿರುತ್ತವೆ; ಕಿರುಪತ್ರಗಳು ಪ್ರತಿ ಗರಿಯಲ್ಲಿ 2 ರಿಂದ 11 ಇದ್ದು ಅಭಿಮುಖ ರೀತಿಯಲ್ಲಿ ಜೋಡಿತಗೊಂಡಿರುತ್ತವೆ ಮತ್ತು 4 – 5.9 X 2 - 4 ಸೆಂ. ಮೀ. ಗಾತ್ರ,ಅಂಡ - ಅಂಡವೃತ್ತ ಆಕಾರ, ಕ್ರಮೇಣ ಚೂಪಾಗುವ ತುದಿ,ಬೆಣೆ ಅಥವಾ ಒಳಬಾಗಿದ, ಅಸಮವಾದ ಬುಡ,ದುಂಡೇಣಿನ ಹಲ್ಲುಳ್ಳ ಅಂಚು, ಚರ್ಮದ ಮೇಲ್ಮೈ ಹೊಂದಿದ್ದು ಬಲಿತಾಗ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 10 ಜೋಡಿಗಳಿದ್ದು,ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು;ಹೂಗಳು ಹಸಿರು ಮಿಶ್ರಿತ ಬಿಳಿ ಬಣ್ಣ.
ಕಾಯಿ / ಬೀಜ : ಡ್ರೂಪ್ ಫಲಗಳು ಅಂಡಾಕಾರ ಅಥವಾ ಅಂಡವೃತ್ತದ ಆಕಾರದಲ್ಲಿದ್ದು,ಉದ್ದನೆಯ ಉತ್ತುಗೆರೆ ಹೊಂದಿದ್ದು ರಸಭರಿತವಾಗಿರುತ್ತದೆ ಮತ್ತು ಹಳದಿ ಬಣ್ಣದಲ್ಲಿರುತ್ತದೆ. ಬೀಜಗಳು 1 ರಿಂದ 6.

ಜೀವಪರಿಸ್ಥಿತಿ :

1000 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ಅರೆನಿತ್ಯ ಹರಿದ್ವರ್ಣ ಕಾಡುಗಳ ಉಪ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಸಿಯದಿಂದ ಆಸ್ಟ್ರೇಲಿಯ; ಪಶ್ಚಿಮ ಘಟ್ಟದ ದಕ್ಷಿಣ ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Diss. 7:364.1789; Gamble, Fl. Madras 176.1997(rep.ed.) ; Sasidharan, Biodiversity documentation for Kerala- Flowering Plants, part 6:90.2004.

Top of the Page