ಮೆಮೆಸಿಲಾನ್ ಟಾಲ್ಬೊಲ್ಟಿಯಾನಮ್ Brandis - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 8 ಮೀ. ಎತ್ತರದವರೆಗೆ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದುನಯವಾದ ಮತ್ತು ಸೂಕ್ಷ್ಮವಾದ ಸೀಳಿಕೆಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ –ಲ್ಲಿರುತ್ತವೆ; ತೊಟ್ಟುಗಳು 0.5-1 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತವೆ ಹಾಗೂ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಪತ್ರಗಳು 5-10 X .8-5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ, ಅಂಡವೃತ್ತ-ಭರ್ಜಿಯ ಆಕಾರದಲ್ಲಿದ್ದು ಸಂಕುಚಿತ ಕ್ರಮೇಣ ಚೂಪಾಗುವ ತುದಿ ಮತ್ತು ಚೂಪಾದ ಅಥವಾ ಒಳಬಾಗಿದ ಬುಡ ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ; ಪತ್ರಗಳು ತೆಳುವಾದ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ ಮತ್ತು ಒಣಗಿದಾಗ ಮಬ್ಬು ಹಳದಿ ಛಾಯೆಯ ಹಸಿರು ಅಥವಾ ಹಳದಿ ಬಣ್ಣ ಹೊಂದಿದ್ದು ಸುಕ್ಕು ಸುಕ್ಕಾಗಿರುತ್ತವೆ; ಮಧ್ಯನಾಳ ಸ್ವಲ್ಪ ಮಟ್ಟಿಗೆ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ನೀಲಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿನ,ಅಥವಾ ಪಾರ್ಶ್ವದಲ್ಲಿನ ಗುಚ್ಛಗಳಲ್ಲಿದ್ದು ಕಿರಿದಾದ ವೃಂತದ ಮೇಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 0.8 ಸೆಂ.ಮೀ.ವರೆಗಿನ ಅಡ್ಡಗಳತೆ ಹೊಂದಿದ್ದು ಮಾಗಿದಾಗ ಹಳದಿ ಬಣ್ಣದಲ್ಲಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 1000 ಮೀ. ಎತ್ತರದವರೆಗಿನ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಮುಖ್ಯವಾಗಿ ಮಧ್ಯ ಸಹ್ಯಾದ್ರಿ ಮತ್ತು ಮಹಾರಾಷ್ಟ್ರದ ದಕ್ಷಿಣ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Talbot, Bombay List.ed.2 Append.1902 & Indian trees336.1906; Gamble, Fl. Madras 1:503.1997 (rep.ed.)Sasidharan, Biodiversity documentation for Kerala Plants, part 6, 182.2004.;Saldanha, Fl. Karnataka 2:40.1996.

Top of the Page