ಮಿಲಿಯೂಸ ಇಂಡಿಕ Lesch. ex A. DC. - ಅನೋನೇಸಿ

Synonym : ಮಿಲಿಯೂಸಮೊಂಟಾನ Gard. ex. J.Hk. & Thoms.; ಮಿಲಿಯೂಸಇಂಡಿಕ Lesch. ex DC. var. ಮೊಂಟಾನ (Gard. ex J.Hk. & Thoms.) J.Hk. & Thoms.;

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ 7ಮೀ ಎತ್ತರದರವರೆಗೆ ಬೆಳೆಯುವ ಸಣ್ಣ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯದಾದ ಕಿರುಕೊಂಬೆಗಳು ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ರೀತಿಯಲ್ಲಿ ಜೋಡಣೆಯಾಗಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ.; ಎಲೆ ಪತ್ರಗಳು 5-7 × 2-27ಸೆಂ.ಮೀ. ಉದ್ದವಿದ್ದು ಅಂಡಾಕಾರ ಹೊಂದಿರುತ್ತದೆ. ಎಲೆಪತ್ರದ ಮೇಲ್ಭಾಗ ರೋಮರಹಿತವಾಗಿರುತ್ತದೆ. ಎಳೆಯದಾದ ಎಲೆಗಳ ತಳಭಾಗ ಮೃದು ತುಪ್ಪಳದಿಂದ ಕೂಡಿರುತ್ತದೆ; ಪತ್ರದ ತುದಿ ಚೂಪಾಗಿರುವುದರಿಂದ ಚೂಪಲ್ಲದವರೆಗಿನ ಮಾದರಿಯಲ್ಲಿದ್ದು ಎಲೆಬುಡ ಗುಂಡಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು ಮಸುಕಾಗಿ ಕಾಣುವ ಸುಮಾರು 12 ಜೋಡಿಗಳಿರುತ್ತವೆ; ತೃತೀಯ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ. ಹೂಗಳು ಶ್ವೇತಬಣ್ಣ ಹೊಂದಿದ್ದು ಸುವಾಸನಾಯುಕ್ತವಾಗಿರುತ್ತವೆ; ಹೂತೊಟ್ಟುಗಳು 0.7 ರಿಂದ 1.5 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಎರಡು ಬೀಜಗಳನ್ನೊಳಗೊಂಡಿದ್ದು ಗುಂಪಿನಲ್ಲಿರುತ್ತವೆ. ಬೆರ್ರಿಗಳು 0.7 ರಿಂದ 1.0ಸೆಂ.ಮೀ. ಗಾತ್ರ, ಕೆಂಪಾದ ಬಣ್ಣ, ರೋಮರಹಿತವಾದ ಮೇಲ್ಮೈ ಹೊಂದಿದ್ದು ಉಪಗೋಳಕಾರದಲ್ಲಿರುತ್ತವೆ; ಕಾಯಿತೊಟ್ಟುಗಳು ಸುಮಾರು 0.5ಸೆಂ.ಮೀ. ಉದ್ದವಿರುತ್ತವೆ.

ಜೀವಪರಿಸ್ಥಿತಿ :

ಕೆಳಛಾವಣಿಯಲ್ಲಿ ಬೆಳೆಯುವ ಈ ಮರ ಸಮುದ್ರ ಮಟ್ಟಕ್ಕಿಂತ 1400ಮೀ ಎತ್ತರದವರೆಗಿನ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳಿಂದ ಒಣ-ನಿತ್ಯಹರಿದ್ವರ್ಣ ಕಾಡುಗಳವರೆಗೆ ಕಂಡುಬರುತ್ತವೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ; ಪಶ್ಚಿಮಘಟ್ಟದಲ್ಲಿ ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿ ಪ್ರದೇಶದಲ್ಲಿ ಈ ಸಸ್ಯ ಬೆಳೆಯುತ್ತವೆ.

ಗ್ರಂಥ ಸೂಚಿ :

Candole, Mem. Anon. 37. 1832; Gamble, Fl. Madras 1: 22.1997 (re.ed); Sasidharan, Biodiversity documentation for Kerala- Flowering Plants, part 6: 18. 2004; Cook, Fl. Bombay 1:15. 1902.

Top of the Page