ಮಿಲಿಯೂಸ್ ನೀಲಗಿರಿಕ Bedd. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಬೃಹತ್ ಪೊದೆಗಳು ಅಥವಾ 5ಮೀ ಎತ್ತರದರವರೆಗೆ ಬೆಳೆಯುವ ಸಣ್ಣ ಮರಗಳು
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಗುಂಡಾಗಿರುತ್ತವೆ ಹಾಗೂ ಸುಕ್ಕಾದ ಮೇಲ್ಮೈ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳ, ಜೋಡಣೆ ಪರ್ಯಾಯ ರೀತಿಯಲ್ಲಿ ಮಾದರಿಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ.; ಎಲೆ ಪತ್ರಗಳ ಗಾತ್ರ 5 - 10 × 2 - 4ಸೆಂ.ಮೀ. ಇದ್ದು ಭರ್ಜಿಯಾಕಾರದಲ್ಲಿ ಅಥವಾ ಅಂಡವೃತ್ತಾಕೃತಿಯುಳ್ಳ ಭರ್ಜಿಯಾಕಾರವನ್ನು ಹೊಂದಿದ್ದು, ಬಾಲರೂಪಿ – ಕ್ರಮೇಣ ಚೂಪಾಗುವ ತುದಿ, ಉಪ- ಬೆಣೆಯಾಕಾರದ ಬುಡವನ್ನು ಹಾಗೂ ರೋಮರಹಿತವಾದ ಮೇಲ್ಮೈ ಹೊಂದಿರುತ್ತವೆ. ಎರಡನೇ ದರ್ಜೆಯ ನಾಳಗಳು ಪ್ರಮುಖವಾಗಿ ಕಾಣದ ಸುಮಾರು 6 ಜೋಡಿಗಳಿರುತ್ತವೆ. ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಅಕ್ಷಾಕಂಕುಳಿನಲ್ಲಿ ಅಥವಾ ಹೊರ ಅಕ್ಷಾಕಂಕುಳಿನಲ್ಲಿ ಹೂಗಳು ಒಂಟಿಯಾಗಿದ್ದು, ಕೆನ್ನೀಲಿ ಬಣ್ಣದವುಗಳಾಗಿರುತ್ತವೆ. ಹೂ ತೊಟ್ಟು 0.5 ರಿಂದ 1.0ಸೆಂ.ಮೀ. ಉದ್ದವಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಕೆಂಪಾಗಿದ್ದು, ಗೋಳಾಕಾರದ ಅಥವಾ ಉಪಗೋಳಕಾರ ಹೊಂದಿದ್ದು ತುದಿಯಲ್ಲಿ ಸೂಕ್ಷ್ಮ ಮೊನಚು ಸಮೇತವಿದ್ದು 1 ರಿಂದ 2 ಬೀಜವನ್ನು ಹೊಂದಿರುತ್ತವೆ. ಹಾಗೂ ಗುಂಪಿನಲ್ಲಿರುತ್ತವೆ.

ಜೀವಪರಿಸ್ಥಿತಿ :

ಬಹುಮಟ್ಟಿಗೆ ಒಣ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಕಂಡು ಬರುವ ಈ ಪ್ರಭೇದ ಸಮುದ್ರ ಮಟ್ಟದಿಂದ 200 ರಿಂದ 1600ಮೀ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮಘಟ್ಟಗಳಿಗೆ ಸೀಮತವಾಗಿರುವ ಈ ಪ್ರಭೇದ ಅಗಸ್ತ್ಯಮಲೆ ಬೆಟ್ಟದ ಶ್ರೇಣ, ವರಶುನಾಡು ಬೆಟ್ಟ ಹಾಗೂ ನೀಲಗಿರಿ ಪ್ರದೇಶಗಳ ಪೂರ್ವ ಇಳಿಜಾರುಗಳಲ್ಲಿ ಕಂಡು ಬರುತ್ತವೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN, 2000)

ಗ್ರಂಥ ಸೂಚಿ :

Beddome, Icon. Pl. Ind. Or. 88. 1868-1874; Gamble, Fl. Madras 1: 22. 1997 (re. ed); Sasidharan, Biodiversity documentation for Kerala- Flowering Plants, part 6: 18. 2004.

Top of the Page