ಮಿಟ್ರೆಫೋರ ಹೇನಿಯಾನ (J. Hk. & Thoms.) Thw. - ಅನೋನೇಸಿ

Synonym : ಓರೋಫಿಯ ಹೇನಿಯಾನ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 12ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು, ಗುಂಡಾಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು ಕಾಲುಗೆರೆ ಸಮೇತವಿದ್ದು, 0.4 ರಿಂದ 0.6 ಸೆಂ.ಮೀ. ಉದ್ದಹೊಂದಿದ್ದು ರೋಮಹಿತವಾಗಿರುತ್ತವೆ. ಎಲೆಪತ್ರಗಳು 4-10 × 2-3.8ಸೆಂ.ಮೀ. ಗಾತ್ರವಿರುತ್ತವೆ. ಪತ್ರಗಳು ಅಂಡಾಕಾರದಿಂದ ಅಂಡವೃತ್ತಾಕಾರದಲ್ಲಿದ್ದು ಮೊಂಡುಚೂಪುಳ್ಳ ಅಥವಾ ಮೊಂಡಾದ ಅಗ್ರವುಳ್ಳ ಇಕ್ಕಟ್ಟಾದ ಕ್ರಮೇಣ ಚೂಪಾಗುವ ತುದಿಯನ್ನು ಹೊಂದಿರುತ್ತವೆ. ಪತ್ರದ ಬುಡ ಚೂಪಾಗಿದುದರಿಂದ ಬೆಣೆಯಾಕಾರದವರೆಗಿನ ಮಾದರಿಯಲ್ಲಿರುತ್ತವೆ ಹಾಗೂ ಕೆಲವು ವೇಳೆ ಗುಂಡಾಗಿಯೂ ಇರುತ್ತವೆ. ಪತ್ರದ ಮೇಲ್ಮೈ ಉಪತೊಗಲಿನ ತರಹವಿದ್ದು, ರೋಮರಹಿತವಾಗಿದ್ದು ಹೊಳಪನ್ನು ಹೊಂದಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ತೆಳುವಾಗಿರುತ್ತದೆ ಹಾಗೂ ಕೊಂಚಮಟ್ಟಿನ ಆರೋಹಣ ಸ್ಥಿತಿಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಒಂಟಿಯಾಗಿ ಅಥವಾ 2 ರಿಂದ 3 ಹೂಗಳು ಎಲೆಗೆ ಅಭಿಮುಖಿಗಳಾದ ಸರಳ ಮಧ್ಯಾರಂಭಿ ಪುಷ್ಪ ಮಂಜರಿಯಲ್ಲಿರುತ್ತವೆ. ಹೂತೊಟ್ಟು ನಸುಗೆಂಪು ಛಾಯೆಯುಳ್ಳ ಹಳದಿ ಬಣ್ಣ ಹಾಗೂ 0.3 ರಿಂದ 0.5 ಸೆಂ.ಮೀ. ಉದ್ದವಾಗಿರುತ್ತದೆ.
ಕಾಯಿ /ಬೀಜ : ಒಂದರಿಂದ ಮೂರು ಬೀಜಗಳ ಸಮೇತವಿದ್ದು ಬೆರ್ರಿಗಳು ಸಾಮೂಹಿಕವಾಗಿರುತ್ತವೆ. ಮತ್ತು ತೀರ ಚಿಕ್ಕದಾದ ತೊಟ್ಟು ಹೊಂದಿದ್ದು ಗೋಳಾಕಾರ ಅಥವಾ ಬೀಜಗಳ ನಡುವೆ ಕಚ್ಚುಳ್ಳ ವರ್ತುಲ ಸ್ಥಂಭಾಕೃತಿಯ ಆಕಾರದಲ್ಲಿದ್ದು ಹಳದಿ ಬಣ್ಣದ ದಟ್ಟಮೃದು ತುಪ್ಪಳದಿಂದ ಕೂಡಿರುತ್ತದೆ.

ಜೀವಪರಿಸ್ಥಿತಿ :

ಕೆಳಛಾವಣಿಯಲ್ಲಿ ಮರವಾಗಿ 800ಮೀ ಎತ್ತರದರೆವಿಗೆ ಬೆಳೆಯುವ ಒಣ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇಧ ಕಂಡುಬರುತ್ತವೆ.

ವ್ಯಾಪನೆ :

ಪಶ್ಚಿಮಘಟ್ಟ (ಅಗಸ್ತ್ಯಮಲೈ ಬೆಟ್ಟದ ಎತ್ತರ ಇಳಿಜಾರು ಪ್ರದೇಶಗಳು, ವರುಶುನಾಡ ಬೆಟ್ಟಗಳು, ಪಳನಿ ಮತ್ತು ನೀಲಗಿರಿ ಪ್ರದೇಶಗಳು) ಮತ್ತು ಶ್ರೀಲಂಕಾದಲ್ಲಿ ಈ ಸಸ್ಯ ಬೆಳೆಯುತ್ತವೆ.

ಗ್ರಂಥ ಸೂಚಿ :

Thwaites and Hooker, Enum. Pl. Zeyl. 8.1864; Gamble, Fl. Madras 1: 19.1997 (re.ed); Sasidharan, Biodiversity documentation for Kerala- Flowering Plants, part 6: 18. 2004.

Top of the Page