ಮಿರಿಸ್ಟಿಕ ಡ್ಯಾಕ್ಟೈಲಾಯ್ಡಿಸ್ Gaertn. - ಮಿರಿಸ್ಟಿಕೇಸಿ

:

Vernacular names : Tamil: ಅಡಕ್ಕಪಯಿನ್,ಚಿತಿರಪೂವು,ಪಸುಪತಿ,ಪಾತಿರಿ ಪೂವು,ಪತ್ತಪನು,ಕಾಟ್ಟು ಜಾತಿ,ಪಂತಪಯಿನ್Malayalam: ಜಾಕಾಯಿ;ಕಾಡು ಜಾಕಾಯಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಹಲವು ಸಂಧರ್ಭಗಳಲ್ಲಿ ದಂಟು ಬೇರುಗಳನ್ನೊಳಗೊಂಡ,20 ಮೀ. ವರೆಗಿನ ಎತ್ತರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಛಾಯೆ ಹೊಂದಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ ಹಾಗೂ ಚಕ್ಕೆಯೇಳುವ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳುಗಳು ಸುತ್ತು ಜೋಡನೆಯಲ್ಲಿದ್ದು ಮುಖ್ಯ ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ; ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ತೊಗಟೆಯನ್ನು ಕೆತ್ತಿದಾಗ ಕೆಂಪು ಬಣ್ಣದ ವಿಫುಲವಾದ ಸಸ್ಯ ರಸವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ; ತೊಟ್ಟುಗಳು 1.5 ರಿಂದ 4 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 12 - 25 X 4 - 12 ಸೆಂ.ಮೀ.ವರೆಗಿನ ಗಾತ್ರವಿದ್ದು ಸಂಕುಚಿತ ಚತುರಸ್ರದಿಂದ ಚತುರಸ್ರ , ಸಂಕುಚಿತ ಅಂಡವೃತ್ತದಿಂದ ಭರ್ಜಿಯವರೆಗಿನ ಆಕಾರಗಳ ವೈವಿಧ್ಯತೆ ಹೊಂದಿದ್ದು, ಮೊಂಡಾಗ್ರವುಳ್ಳ ಚೂಪಾದ ಅಥವಾ ಚೂಪಲ್ಲದ ತುದಿ, ಚೂಪಾದ ಅಥವಾ ದುಂಡಾದ ಬುಡ,ನಯವಾದ ಅಂಚು, ದಪ್ಪವಾಗಿರುವ ತೊಗಲನ್ನೋಲುವ ಮಾದರಿಯ ಮೇಲ್ಮೈ ಹೊಂದಿರುತ್ತವೆ,ಪತ್ರಗಳು ಮೇಲ್ಭಾಗದಲ್ಲಿ ಹೊಳಪಿನಿಂದ ಕೂಡಿದ್ದು ತಳಭಾಗ ಬಿಳಿಯದಾದ ಮಾಸಲು ಬೂದು ಹಸಿರು ಬಣ್ಣದಲ್ಲಿರುತ್ತವೆ ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 10 - 18 ಜೋಡಿಗಳಿದ್ದು ಪತ್ರಗಳ ಮೇಲ್ಭಾಗದಲ್ಲಿ ಮುದ್ರೆ ಒತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ, ಸ್ಪಷ್ಟವಾಗಿ ಕಂಡಲ್ಲಿ ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಬಿಳಿ ಬಣ್ಣ ಹೊಂದಿರುತ್ತವೆ;ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ,10 ರಿಂದ 20 ಹೂಗಳನ್ನೊಳಗೊಂಡ ಪೀಠಛತ್ರ ಪುಷ್ಪ ಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ತೊಟ್ಟುರಹಿತವಾಗಿದ್ದು ಗುಚ್ಛಗಳಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ ಅಂಡಾಕೃತಿಯಲ್ಲಿದ್ದು 6 X 4 ಸೆಂ.ಮೀವರೆಗಿನ ಗಾತ್ರ ಹೊಂದಿದ್ದು, ದಟ್ಟ ಮೃದುಗೂದಲುಗಳಿಂದ ಕೂಡಿರುತ್ತವೆ; ಬೀಜಗಳು ಒಂದಿದ್ದು ಅಂಡಾಕಾರದಲ್ಲಿದ್ದು ಕಡುಗೆಂಪು ಬಣ್ಣದ ಆಳವಾದ ಸೀಳಿಕೆಗಳನ್ನುಳ್ಳ ಪತ್ರೆಯಿಂದ ಆವೃತವಾಗಿರುತ್ತವೆ.

ಜೀವಪರಿಸ್ಥಿತಿ :

1500 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಉಪ-ಮೇಲ್ಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀ ಲಂಕಾ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ, ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Fruct. 1: 195.t 41.f..202.1788;Gamble, Fl. Madras 3:1214.1998(rep.ed.); Saldanha, Fl. Karnataka 1: 54.1984.

Top of the Page