ಮಿರಿಸ್ಟಿಕ ಫಟುವ Houtt. var. ಮ್ಯಾಗ್ನಿಫಿಕ (Bedd.) Sinclair - ಮಿರಿಸ್ಟಿಕೇಸಿ

ಪರ್ಯಾಯ ನಾಮ : Bedd.

Vernacular names : Tamil: ಕೊತ್ತಪನು;ಚುರಪಯಿನ್;ಕೊತಪಯಿನ್;ಕಟ್ಟಪಣ್ಣುMalayalam: ರಾಮಪತ್ರೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಹಲವು ಸಂಧರ್ಭಗಳಲ್ಲಿ ಆನಿಕೆ ಬೇರುಗಳ ಸಮೇತವಿರುವ 20 ಮೀ. ವರೆಗಿನ ಎತ್ತರದ ಮರಗಳಾದ ಈ ಪ್ರಭೇದ ದಂಟು ಬೇರು ಮತ್ತು ವಾಯು ಸಾಗಣೆ ಅಥವಾ ‘ಉಸಿರಾಟದ’ ಬೇರುಗಳನ್ನು ಹೊಂದಿರುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆ ಕೆನ್ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆಯ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ದೃಢವಾಗಿರುತ್ತವೆ ಮತ್ತುತುಕ್ಕು ಬಣ್ಣದ ದಟ್ಟವಾದ ತುಪ್ಪಳದಿಂದ ಕೂಡಿರುತ್ತವೆ.
ಜಿನುಗು ದ್ರವ : ತೊಗಟೆಯನ್ನು ಕೆತ್ತಿದಾಗ ಕೆಂಪು ಬಣ್ಣದ ವಿಫುಲವಾದ ಸಸ್ಯ ರಸವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 2 ರಿಂದ 4 ಸೆಂ.ಮೀ. ಉದ್ದ ಹೊಂದಿದ್ದು ಧೃಢವಾಗಿರುತ್ತವೆ ಮತ್ತು ಕಾಲುವೆಗೆರೆ ಸಮೇತವಿದ್ದು ಎಳೆಯದಾಗಿದ್ದಾಗ ದಟ್ಟವಾದ ಮೃದುತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ;ಪತ್ರಗಳು 20 - 60 X 10 - 15 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ- ಚತುರಸ್ರದ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ಚೂಪಾದ ಅಥವಾ ಕ್ರಮೇಣವಾಗಿ ಚೂಪಾಗುವ ತುದಿ,ದುಂಡಾದ ಅಥವಾ ಉಪ ಛಿನ್ನಾಗ್ರ ರೀತಿಯ ಬುಡ,ನಯವಾದ ಅಂಚು, ದಪ್ಪನೆಯ ತೊಗಲನ್ನೋಲುವ ಮಾದರಿಯ ಮೇಲ್ಮೈ ಹೊಂದಿರುತ್ತವೆ, ಪತ್ರಗಳು ಮೇಲ್ಭಾಗದಲ್ಲಿ ಹೊಳಪಿನಿಂದ ಕೂಡಿದ್ದು ತಳಭಾಗ ತುಕ್ಕು ಬಣ್ಣದ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 12 - 18 ಜೋಡಿಗಳಿದ್ದು ಪತ್ರಗಳ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ, ಸ್ಪಷ್ಟವಾಗಿ ಕಂಡಲ್ಲಿ ಎಲೆದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಹೂಜಿಯಾಕಾರ ಹೊಂದಿರುತ್ತವೆ;ಗಂಡು ಹೂಗಳು10 ರಿಂದ 20 ಹೂಗಳನ್ನೊಳಗೊಂಡ ದಾರುವಿನಂತಹ ವೃಂತದ ಮೇಲಿದ್ದು ಪೀಠಛತ್ರ ಪುಷ್ಪ ಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು 2 ಅಥವಾ 3 ಹೂಗಳನ್ನೊಳಗೊಂಡ ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲ 10.5 X 5 – 7 ಸೆಂ.ಮೀ. ಗಾತ್ರವಿದ್ದು ಅಂಡವೃತ್ತ - ಅಂಡಾಕೃತಿಯಲ್ಲಿದ್ದು ದಟ್ಟವಾದ ತುಕ್ಕು ಬಣ್ಣದ ಮೃದುಗೂದುಗೂದಲುಗಳಿಂದ ಕೂಡಿರುತ್ತವೆ; ಬೀಜಗಳು ಸಂಖ್ಯೆ ಒಂದಿದ್ದು ವರ್ತುಲ ಸ್ಥಂಭಾಕೃತಿಯಲ್ಲಿರುತ್ತವೆ ಮತ್ತು ಕಡು ಕಿತ್ತಳೆ-ಕೆಂಪು ಬಣ್ಣದ ಆಳವಾದ ಸೀಳಿಕೆಗಳನ್ನುಳ್ಳ ಪತ್ರೆಯಿಂದ ಆವೃತವಾಗಿರುತ

ಜೀವಪರಿಸ್ಥಿತಿ :

600 ಮೀ.ವರೆಗಿನ ಎತ್ತರದ ಸಿಹಿ ನೀರಿನ ಜೌಗು ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ(ಪಶ್ಚಿಮ) ಮತ್ತು ಮಧ್ಯ ಮಲೆನಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN 2000).

ಗ್ರಂಥ ಸೂಚಿ :

Gard. Bull. Singapore 23:282.1968;Gamble, Fl. Madras 3:1214.1998 (rep.ed.); Sasidharan, Biodiversity documentation for Kerala- Flowering Plants, part 6:393.2004;Saldanha, Fl. Karnataka 1: 54.1984.

Top of the Page