ನೋತೊಪೀಜಿಯ ಹೇನಿಯಾನ (J. Hk.) Gamble var. ಹೇನಿಯಾನ - ಅನಕಾರ್ಡಿಯೇಸಿ

Synonym : ನೋತೊಪೀಜಿಯ ಕೋಲೆಬ್ರೂಕಿಯಾನ (Wt.) Bl. var. ಹೇನಿಯಾನ J.Hk.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆವಿಗೆ ಬೆಳೆಯುವ ಚಿಕ್ಕಮರಗಳು.
ಕಾಂಡ ಮತ್ತು ತೊಗಟೆ : ಕಂದು ಮಿಶ್ರಿತ ನಸುಗೆಂಪು ಕಚ್ಚುಗಳನ್ನೊಳಗೊಂಡ, ಸೂಕ್ಷ್ಮವಾದ ಸೀಳೀಕಾ ಮಾದರಿಯ ತೊಗಟೆಯನ್ನು ಈ ಪ್ರಭೇಧ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಕಿರುಕೊಂಬೆಗಳು ಸೂಕ್ಷ್ಮವಾದ ಮೃದು ತುಪ್ಪಳದಿಂದ ಕೂಡಿದ್ದು ಬಲಿತ ಮೇಲೆ ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರವು ಅತಿಖಾರ ಮತ್ತು ಕಹಿವಾಗಿಯೂ ಇರುತ್ತದೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟು 0.3-0.5 ಸೆಂ.ಮೀ. ಉದ್ದವಾಗಿರುತ್ತದೆ; ಎಲೆ ಪತ್ರ 4 – 11.5 x 1 - 3 ಸೆಂ.ಮೀ ಗಾತ್ರವನ್ನು ಹೊಂದಿದ್ದು, ಅಂಡವೃತ್ತಾಕೃತಿ -ಧೀರ್ಘ ಚತುರಸ್ರಾಕಾರದಲ್ಲಿರುತ್ತದೆ; ಮೊಂಡುಮಿಶ್ರಿತ ಚೂಪಾದ ತುದಿ, ಚೂಪಾದ ಬುಡ, ನಯವಾದ ಅಂಚು, ತೊಗಲಿನಂತಹ ಮೇಲ್ಮೈಯನ್ನು ಪತ್ರಗಳು ಹೊಂದಿದ್ದು ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ; ಎರಡನೇ ದರ್ಜೆ ನಾಳಗಳು 15 ರಿಂದ 25 ಜೋಡಿಗಳಿದ್ದು ಮಿತವಾದ ಕೋನಗಳನ್ನು ಹೊಂದಿರುತ್ತವೆ;ಮೂರನೇ ದರ್ಜೆ ನಾಳಗಳು ದುರ್ಬಲವಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ತೊಟ್ಟುರಹಿತ ಹಾಗೂ ಸಂಕೀರ್ಣ ಲಿಂಗಿಗಳಾಗಿದ್ದು,ದಟ್ಟ ಮೃದು ತುಪ್ಪಳವುಳ್ಳ, ಪುನರಾವೃತ್ತಿಯಾಗಿ ಕವಲೊಡೆದ ಅನಿಯತ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಫಲ ಮಾದರಿಯವು ಹಾಗೂ ಸಂಕುಚಿತವಾಗಿದ್ದುಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಈ ಪ್ರಭೇಧ ಕಡಿಮೆ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣಕಾಡುಗಳಲ್ಲಿ ಕೆಳ ಛಾವಣಿಯಲ್ಲಿ ಒಣ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲೂ ಬೆಳೆಯುತ್ತವೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪಗಳಿಗೆ ಸೀಮಿತ. ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿಯ ಪ್ರದೇಶದಲ್ಲಿ ಈ ಸಸ್ಯ ಬೆಳೆಯುತ್ತದೆ.

ಸ್ಥಿತಿ :

ಕಡಿಮೆ ಅಪಾಯದಂಚಿನಲ್ಲಿ ಹಾಗೂಆತಂಕ ಸ್ಥಿತಿಗೆ ಹತ್ತಿರವಿರುವ ಸಸ್ಯ. (IUCN 2000)

ಗ್ರಂಥ ಸೂಚಿ :

Fl. Pres. Madras 1: 180. 1918; Gamble, Fl. Madras 1: 265. 1997 (re. ed); Saldanha, Fl. Karnataka 2: 207. 1996; Sasidharan, Biodiversity documentation for Kerala- Flowering Plants, part 6: 112. 2004.

Top of the Page