ಆಕ್ರಿನಾಕ್ಳಿಯ ಮಿಷನಿಸ್ (Wall. ex G. Don) Ridsd. - ರೂಬಿಯೇಸಿ

ಪರ್ಯಾಯ ನಾಮ : ನಾಕ್ಳಿಯ ಮಿಷನಿಸ್ Wall. ex G. Don

Vernacular names : Tamil: ಅಟ್ಟು-ವಂಜಿ. ನೀರ್ವಂಚಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗಿನ ಸದಾಪರ್ಣಿ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೊಂಚ ಮಟ್ಟಿಗೆ ಕೋನಯುಕ್ತವಾಗಿರುತ್ತವೆ,ಬಲಿತಾಗ ದುಂಡಾಗಿರುತ್ತವೆ, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇರುತ್ತವೆ ಮತ್ತು ಉದುರಿದಾಗ ಗುರುತನ್ನು ಉಳಿಸುತ್ತವೆ;ತೊಟ್ಟು ಅಂದಾಜು 1 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 8.5 -16 X 3-6 ಸೆಂ.ಮೀ. ಗಾತ್ರ ಹೊಂದಿದ್ದು ಭರ್ಜಿ,ಅಂಡವೃತ್ತ, ಅಥವಾ ಬುಗುರಿಯ ಆಕಾರ ಹೊಂದಿದ್ದು, ಚೂಪಾದುದರಿಂದ ಚೂಪಲ್ಲದ ಮಾದರಿವರೆಗಿನ ತುದಿ, ಒಳಬಾಗಿದ ಅಥವಾ ತಳಭಾಗಕ್ಕೆ ವಿಸ್ತರಿಸಿದ ಮಾದರಿವರೆಗಿನ ಬುಡ, ನಯವಾದ ಅಂಚು,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 10 ರಿಂದ 13 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಗೋಳಾಕಾರ ಮಂಜರಿ ಮಾದರಿಯವು;ಹೂಗಳು ತೊಟ್ಟುರಹಿತವಾಗಿದ್ದು ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : 2-ಕೋಶಯುಕ್ತ ಪೈರೀನ್ಗಳು ಗೋಳಾಕಾರದ ಗುಂಪಿನಲ್ಲಿರುತ್ತವೆ ಮತ್ತು ಮಾಂಸಲವಾಗಿರುತ್ತವೆ; ಬೀಜಗಳು ಅಂಡಾಕಾರದಲ್ಲಿದ್ದು ಪ್ರತಿ ಕೋಶದಲ್ಲಿ ಕೆಲವು ಸಂಖ್ಯೆಯಲ್ಲಿರುತ್ತವೆ.

ಜೀವಪರಿಸ್ಥಿತಿ :

700 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಹೊಳೆಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ, ಪಾಲಕ್ಕಾಡು ಮತ್ತು ಮಲಬಾರು ಪ್ರದೇಶಗಳಲ್ಲಿ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ಥಿತಿ(IUCN, 2000).

ಗ್ರಂಥ ಸೂಚಿ :

Blumea 24. 332. 1978; Gamble, Fl. Madras 2: 582. 1993 (re. ed); Sasidharan, Biodiversity documentation for Kerala- Flowering Plants, part 6: 226. 2004; Almeida, Fl. Maharashtra 3:42. 2001.

Top of the Page