ಓಲಿಯ ಡೈಯಾಯ್ಕ Roxb. - ಓಲಿಯೇಸಿ

:

Vernacular names : Tamil: ಎಡನ,ಎಟಲ,ಎರಿಪ್ಪ;ಕರಿವೆಟ್ಟಿ;ಪಲರನ;ವಳಿಯ ವೆಟಿಲ,ವಯಲ;ವಿದ್ನ;ವೆಲMalayalam: ತಡಲೆ;ಕಲ್ಲುತೊಡ್ಲಿ;ಅಕ್ಕಿವರಕಲು,ಬಟ್ಟೆಹರಕಲು,ಬಿಳಿಸರಳಿ,ಹೆಜ್ಜೆವರಕಲು,ಮಡ್ಲೆ ಮರ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ಒರಟಾಗಿರುತ್ತದೆ ಕಚ್ಚು ಮಾಡಿದ ಜಾಗ ಬಿಳಿಯಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ-ಚತುಷ್ಕೋನ ಹೊಂದಿದ್ದು, ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಎಲೆತೊಟ್ಟುಗಳು0.6 – 1.3 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುಗೆರೆ ಸಮೇತವಿರುತ್ತವೆ; ಪತ್ರಗಳು7.5-17.5 X 2.3-7.5 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ-ಚತುರಸ್ರದವರೆಗಿನ ಆಕಾರ, ನಿಧಾನ ಗತಿಯಲ್ಲಿ ಕ್ರಮೇಣ ಚೂಪಾಗುವುದರಿಂದ ಉಪಚೂಪಾದ ಮಾದರಿವರೆಗಿನ ತುದಿ, ಚೂಪಾದುದರಿಂದ ಒಳಬಾಗಿದ ಮಾದರಿವರೆಗಿನ ಬುಡ, ದಂತಗಳ ನಡುವೆ ಹೆಚ್ಚಿನ ಅಂತರವುಳ್ಳ ಗರಗಸ ದಂತಿತ ಮಾದರಿಯ (ದೃಢವಾದ ದಂತಗಳೊಡನೆ)ಅಥವಾ ನಯವಾದ ಅಂಚು, ಕಾಗದ ಅಥವಾ ಉಪ-ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ,ಒಣಗಿದಾಗ ಸಾಮಾನ್ಯವಾಗಿ ಕೆಂಪು ಛಾಯೆ ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು 8 ರಿಂದ 12 ಜೋಡಿಗಳಿರುತ್ತವೆ; ಮೂರನೇ ಮತ್ತು ಮೇಲ್ದರ್ಜೆಯ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪ್ರಧಾನ ಕಾಂಡದ ಸಮಕೋನದಲ್ಲಿದ್ದು ಕವಲೊಡೆಯುವ ಮಾದರಿಯವುಗಳಾಗಿರುತ್ತವೆ;ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ,ಹೂಗಳು ಕೆನೆ-ಬಿಳಿ ಬಣ್ಣದವು;ಹೂ ತೊಟ್ಟುಗಳು 0.4 ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡವೃತ್ತದ ಆಕಾರದಲ್ಲಿದ್ದು ಕಳಿತಾಗ ಹಸಿರು ಬಣ್ಣದಲ್ಲಿರುತ್ತವೆ;ಬೀಜ 1.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಮತ್ತು ತೇವಾಂಶದಿಂದ ಕೂಡಿದ ಎಲೆಯುದುರು ಕಾಡುಗಳ ಒಳಛಾವಣಿಯಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಭಾರತ;ಪಶ್ಚಿಮ ಘಟ್ಟದಲ್ಲಿನ ಎಲ್ಲಾ ಪ್ರದೇಶಗಲು.

ಗ್ರಂಥ ಸೂಚಿ :

DC., Prodr. 8: 294.1844; Gamble, Fl. Pres.Madras 796:1993(rep.ed.);Sasidharan, Biodiversity documentation for Kerala- Flowering Plants,part 6:279.2004; Cooke,Fl. Bombay 2:118.1908; Almeida,Fl.Maharashtra 3:190.2001

Top of the Page