ಓರೋಫಿಯಾ ಜೇಲಾನಿಕ J. Hk.& Thoms. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ ಸಣ್ಣ ಮರಗಳಾದ ಈ ಪ್ರಭೇದ 5ಮೀ ಎತ್ತರದವರಗೆ ಬೆಳೆಯುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು, ಗುಂಡಾಗಿದ್ದು, ಸುಕ್ಕು ಸುಕ್ಕಾಗಿರುವ ದಟ್ಟ ಮೃದು ತುಪ್ಪಳದಿಂದ ಆವೃತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುವ ಮಾದರಿಯಲ್ಲಿರುತ್ತವೆ. ಎಲೆಪತ್ರ 5 - 8.5 × 2.2 - 3.5ಸೆಂ.ಮೀ, ಗಾತ್ರವಿದ್ದು ಅಂಡವೃತ್ತಾಕೃತಿ ಅಥವಾ ಅಂಡಾಕಾರದಲ್ಲಿದ್ದು, ಸಣ್ಣ ಹಾಗೂ ಮೊಂಡಾದ ಅಗ್ರವನ್ನುಳ್ಳ, ಕ್ರಮೇಣ ಚೂಪಾಗುವ ತುದಿ ಹಾಗೂ ಚೂಪಾದ ಬುಡಭಾಗವನ್ನು ಪಡೆದಿರುತ್ತವೆ. ಕಾಗದವನ್ನೋಲುವ ಮೇಲ್ಮೈಯನ್ನು ಪತ್ರಗಳು ಹೊಂದಿದ್ದು ರೋಮರಹಿತವಾಗಿರುತ್ತವೆ. ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದ ಹಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು ತೆಳುವಾಗಿದ್ದು 4 ರಿಂದ 7 ಜೋಡಿಗಳಿರುತ್ತವೆ. ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು ಹಾಗೂ ಹೆಚ್ಚು ಪ್ರಾಮುಖ್ಯವಾಗಿ ಕಾಣದವು.
ಪುಷ್ಪಮಂಜರಿ/ಹೂಗಳು : ಗೋಳಾಕಾರದಲ್ಲಿರುವ ಬೆರ್ರಿಗಳು ಒಂದರಿಂದ ಎರಡು ಬೀಜಗಳನ್ನು ಹೊಂದಿರುತ್ತವೆ ಹಾಗೂ ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ಒಳ ಛಾವಣಿಯ ಮರಗಳಾಗಿ ಮಧ್ಯಮ ಎತ್ತರವುಳ್ಳ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟ (ಮಧ್ಯ ಸಹ್ಯಾದ್ರಿ ಪ್ರದೇಶ ಹಾಗೂ ತಮಿಳು ನಾಡಿನ ಪಾಲ್ಕಾಡ್ ಘಟ್ಟಗಳು) ಮತ್ತು ಶ್ರೀಲಂಕಾ

ಗ್ರಂಥ ಸೂಚಿ :

Hooker and Thomson, Fl. Ind. 111.1855; Keshava Murthy and Yoganarasimhan, Fl. Coorg (Kodagu) 33. 1990; Gamble, Fl. Madras 1: 24.1997 (re.ed); Sasidharan, Biodiversity documentation for Kerala- Flowering Plants, part 6: 19. 2004; Saldanha, Fl. Karnataka 1: 47. 1996.

Top of the Page