ಪಲಾಕ್ವಿಯಮ್ ಬೋರ್ಡಿಲ್ಲೋನಿಯೈ Brandis - ಸಪೋಟೇಸಿ

:

Vernacular names : Tamil: ತೆನ್ಪರಟ್ಟಿMalayalam: 

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗಿನ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು,ಬಲಿತಾಗ ಚಕ್ಕೆಯೇಳುವ ಮಾದರಿಯಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ನಸುಗೆಂಪು .
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು “ಆಬ್ರೆವಿಲ್ಲೆ” ಮಾದರಿಯಲ್ಲಿರುತ್ತದೆ;ಎಳೆಯ ಕಿರುಕೊಂಬೆಗಳು ದುಂಡಾಗಿದ್ದು,ಎಳೆಯದಾಗಿದ್ದಾಗ ತುಕ್ಕು ಬಣ್ಣದ ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಹಾಲಿನ ಬಿಳಿ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 2 ಸೆಂ.ಮೀ.ವರೆಗಿನ ಉದ್ದವಿದ್ದು, ದೃಢವಾಗಿದ್ದು,ದುಂಡಾಗಿರುವುದರಿಂದ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದವರೆಗಿನ ಆಕಾದಲ್ಲಿರುತ್ತವೆ, ಎಳೆಯದಾಗಿದ್ದಾಗ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತದೆ,ನಂತರ ರೋಮರಹಿತವಾಗಿರುತ್ತದೆ; ಪತ್ರಗಳು 10 -21 X 4.5 –7 ಸೆಂ.ಮೀ. ಗಾತ್ರ,ಬುಗುರಿಭರ್ಜಿಯ ಆಕಾರ ಹೊಂದಿದ್ದು,ಮೊಂಡಾಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ,ಬೆಣೆ-ಒಳಬಾಗಿದ ಬುಡ,ನಯವಾದ ಅಂಚು, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ಒಣಗಿದಾಗ ಮೇಲ್ಭಾಗ ಕಪ್ಪಾಗಿರುತ್ತದೆ ,ತಳಭಾಗಕಂದು ಬಣ್ಣದಲ್ಲಿರುತ್ತದೆ,ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8 - 10 ಜೋಡಿಗಳಿದ್ದು, ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ ಅಥವಾ ಒಂಟಿಯಾಗಿರುತ್ತವೆ,ಬಿಳಿ ಬಣ್ಣ ಹೊಂದಿರುತ್ತವೆ; ತೊಟ್ಟು 2 ಸೆಂ.ಮೀ. ವರೆಗಿನ ಉದ್ದ ಹೊಂದಿರುತ್ತದೆ.
ಕಾಯಿ / ಬೀಜ : ಬೆರ್ರಿ 3.5 ಸೆಂ.ಮೀ. ಉದ್ದವಿದ್ದು,ಅಂಡವೃತ್ತದ ಆಕಾರದಲ್ಲಿದ್ದು ಕೊಕ್ಕಿನ ಸಮೇತವಿರುತ್ತದೆ;ಬೀಜದ ಸಂಖ್ಯೆ 1.

ಜೀವಪರಿಸ್ಥಿತಿ :

500 ಮತ್ತು1200 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಉಪಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಬೇಧ ಅಗಸ್ತ್ಯಮಲೈನಲ್ಲಿ ಕಂಡುಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000).

ಗ್ರಂಥ ಸೂಚಿ :

Indian Trees 424. 1906; Gamble, Fl. Madras 2: 765. 1993 (re.ed.); Sasidharan, Biodiversity documentation for Kerala- Flowering Plants, part 6: 269. 2004.

Top of the Page