ಫೋಬೆ ಲ್ಯಾಂಸಿಯೋಲೇಟ Nees - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ.ವರೆವಿಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಇದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 0.3 - 2 ಸೆಂ.ಮೀ. ಉದ್ದ ಹೊಂದಿರುತ್ತವೆ;ಪತ್ರಗಳು 7- 20.3 X1.7 – 6.5 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತ – ಭರ್ಜಿಯ ಆಕಾರ ಹೊಂದಿರುತ್ತವೆ; ತುದಿ ಕ್ರಮೇಣ ಚೂಪಾದುದರಿಂದ ಬಾಲರೂಪಿ ಮಾದರಿವರೆಗಿನ ಆಕಾರದಲ್ಲಿರುತ್ತದೆ ಮತ್ತುಎಲೆಯ ಬುಡ ಸಂಕುಚಿತವಾಗಿ ಒಳಬಾಗುವ ರೀತಿಯದಾಗಿರುತ್ತದೆ;ಪತ್ರಗಳು ರೋಮರಹಿತವಾಗಿರುತ್ತವೆ ಮತ್ತು ಮಾಸಿದ ಬೂದು ಹಸಿರು ಬಣ್ಣದ ತಳಭಾಗವನ್ನು ಹೊಂದಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 9-13 ಜೋಡಿಗಳಿರುತ್ತವೆ ಮತ್ತು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ ಮತ್ತು ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ .
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಅಥವಾ ಉಪ-ತುದಿಯಲ್ಲಿನ ತೆಳುವಾಗಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿರುತ್ತವೆ ಮತ್ತು 10 ಸೆಂಮೀ. ವರೆಗಿನ ಉದ್ದ ಹೊಂದಿರುತ್ತವೆ;ಹೂಗಳು ಸಾಮಾನ್ಯವಾಗಿ ದ್ವಿಲಿಂಗಿಗಳು ಅಥವಾ ಸಂಕೀರ್ಣ ಲಿಂಗಿಗಳಾಗಿರುತ್ತವೆ;ಪುಷ್ಪಾವರಣ ಹಳದಿ ಬಣ್ಣದಲ್ಲಿರುತ್ತವೆ;ಪರಾಗಾಶಯಗಳು 4 ಕೋಶವನ್ನೊಳಗೊಂಡಿರುತ್ತವೆ.
ಕಾಯಿ /ಬೀಜ : ಬೆರ್ರಿ ಅಂಡವೃತ್ತದಾಕಾರದಲ್ಲಿದ್ದು ಕಪ್ಪು ಬಣ್ಣ ಹೊಂದಿರುತ್ತದೆ;ಬೀಜ 1.

ಜೀವಪರಿಸ್ಥಿತಿ :

900 – 1600 ಮೀ. ನಡುವಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತ ಮತ್ತು ಮ್ಯಾನ್ಮಾರ್; ಪಶ್ಚಿಮ ಘಟ್ಟದಲ್ಲಿ ಈ ಸಸ್ಯ ದಕ್ಷಿಣ ಮತ್ತು ಮಧ್ಯ, ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Syst. Laurin. 106.1836;Gamble, Fl. Madras 2:1228.1993 (rep.ed.); Sasidharan, Biodiversity documentation for Kerala Flowering Plants, part 6: 401. 2004; Saldanha, Fl.Karnataka 1:72.1984.

Top of the Page